ಚಿತ್ರದುರ್ಗ:ಕರ್ನಾಟಕ ರತ್ನ, ಮಾಜಿ ಸಿಎಂ ಎಸ್.ನಿಜಲಿಂಗಪ್ಪನವರ ಕೊಡುಗೆ ಕರ್ನಾಟಕಕ್ಕೆ ಅಪಾರವಾಗಿದೆ. ಅವರು ಬದುಕಿ ಬಾಳಿದ ನಿವಾಸದ ಅಭಿವೃದ್ಧಿಗೆ ಸರ್ಕಾರ ಕಳೆದ ವರ್ಷವೇ ಮುಂದಾಗಿತ್ತು. ಆದರೆ ಇನ್ನೂ ನಿವಾಸ ಅಭಿವೃದ್ಧಿಯಾಗದೇ ಇರುವುದಕ್ಕೆ ಜಿಲ್ಲೆಯ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಯ ನಿವಾಸದ ಹಿಂಭಾಗದಲ್ಲಿರುವ ನಿಜಲಿಂಗಪ್ಪನವರ ಮನೆ ಸ್ಮಾರಕವಾಗಬೇಕು ಅನ್ನೋದು ಜಿಲ್ಲೆಯ ಜನತೆಯ ಕನಸಾಗಿತ್ತು. ಈ ನಿಟ್ಟಿನಲ್ಲಿ ಕಳೆದ ಬಜೆಟ್ನಲ್ಲಿ 5 ಕೋಟಿ ರೂ ಹಣವನ್ನು ಸರ್ಕಾರ ಮೀಸಲಿಡುವುದಾಗಿ ಘೋಷಣೆ ಕೂಡ ಮಾಡಿತ್ತು.