ಚಿತ್ರದುರ್ಗ :ಗುಜರಾತ್ನ ಅಹಮದಾಬಾದ್ನಿಂದ ಚಿತ್ರದುರ್ಗಕ್ಕೆ ಮರಳಿದ 15 ತಬ್ಲಿಘಿಗಳ ಪೈಕಿ ಮೂವರಿಗೆ ಸೋಂಕು ದೃಢಪಟ್ಟಿದೆ. ಅವರಿಗೆ ಊಟ ತಂದುಕೊಟ್ಟಿದ್ದ ಇಬ್ಬರು ನಾಪತ್ತೆಯಾಗಿದ್ದು, ಜಿಲ್ಲಾಡಳಿತಕ್ಕೆ ತಲೆಬಿಸಿಯಾಗಿ ಪರಿಣಮಿಸಿದೆ.
ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ 15 ಜನ ತಬ್ಲಿಘಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟ ತಂದು ಕೊಡುತ್ತಿದ್ದ ವ್ಯಕ್ತಿಗಳು ಇಬ್ಬರು ತಬ್ಲಿಘಿಗಳಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ನಿನ್ನೆಯಿಂದ ಕಾಣೆಯಾಗಿದ್ದಾರೆ.
ಸೋಂಕಿತರು ಕ್ವಾರಂಟೈನ್ ಆಗಿದ್ದ ಹಾಸ್ಟೆಲ್ ಪ್ರದೇಶ ಸೀಲ್ಡೌನ್.. ಇಬ್ಬರಿಗಾಗಿ ಪೊಲೀಸರ ಶೋಧ ನಡೆಸಿದ್ದಾರೆ. ಸರ್ಕಾರದಿಂದಲೇ ಆಹಾರ ವ್ಯವಸ್ಥೆ ಮಾಡುವ ಬದಲು ಸಂಬಂಧಿಗಳಿಗೆ ಅವಕಾಶ ನೀಡುವ ಮೂಲಕ ಜಿಲ್ಲಾಡಳಿತ ಎಡವಟ್ಟು ಮಾಡಿಕೊಂಡಿದೆ. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.
ತಬ್ಲಿಘಿಗಳಿಗೆ ಕ್ವಾರಂಟೈನ್ ಮಾಡಿದ ಅಧಿಕಾರಿಗಳ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಕೂಡ ಮುಂಜಾಗ್ರತಾ ಕ್ರಮವಾಗಿ ಸಂಗ್ರಹಿಸಲಾಗಿದೆ. ಉಪವಿಭಾಗಧಿಕಾರಿ, ತಹಶೀಲ್ದಾರ್, ಪೊಲೀಸರು, ಆರೋಗ್ಯ ಅಧಿಕಾರಿಗಳು, ಪತ್ರಕರ್ತರು ಸೇರಿ ಒಟ್ಟು 18 ಮಂದಿ ಮಾದರಿ ಸಂಗ್ರಹಿಸಲಾಗಿದೆ. ಒಟ್ಟು 77 ಮಂದಿಯ ಮಾದರಿ ಲ್ಯಾಬ್ಗೆ ರವಾಸಿನಲಾಗಿದೆ. ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.