ಕರ್ನಾಟಕ

karnataka

ETV Bharat / state

ಗ್ರಾಮಸ್ಥರ ಮನ ಪರಿವರ್ತನೆ, ಜ್ಞಾನಾರ್ಜನೆ ಮುಖ್ಯ: ಸಂಸದ ಎ.ನಾರಾಯಣಸ್ವಾಮಿ - chitradurga latest news

ದಲಿತ ಎಂಬ ಕಾರಣಕ್ಕೆ ಪ್ರವೇಶ ನಿರಾಕರಿಸಿದ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪರಮನಹಳ್ಳಿ ಗೊಲ್ಲರಹಟ್ಟಿ ಗ್ರಾಮಸ್ಥರ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಮನಪರಿವರ್ತನೆ, ಜಾಗೃತಿ ಅವಶ್ಯ ಎಂದು ಸಂಸದ ಎ.ನಾರಾಯಣಸ್ವಾಮಿ ಟ್ವೀಟ್​ ಮಾಡಿದ್ದಾರೆ.

ಸಂಸದ ಎ.ನಾರಾಯಣಸ್ವಾಮಿ

By

Published : Sep 18, 2019, 6:32 PM IST

ಚಿತ್ರದುರ್ಗ:ಮಾದಿಗ ಸಮುದಾಯ ಹಾಗೂ ಸಂಘಟನೆಯ ಬಂಧುಗಳಲ್ಲಿ ವಿನಂತಿಸಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಪ್ರತಿಭಟನೆಗೆ ಮುಂದಾಗಬೇಡಿ. ದಲಿತ ಎಂಬ ಕಾರಣಕ್ಕೆ ಗ್ರಾಮದ ಪ್ರವೇಶ ನಿರಾಕರಿಸಿದ ಗ್ರಾಮಸ್ಥರಿಗೆ ಶಿಕ್ಷಣ ನೀಡಿ ಮನ ಪರಿವರ್ತನೆಗೆ ಮುಂದಾಗೋಣ. ಆ ವರ್ಗಕ್ಕೆ ಜಾಗೃತಿ ಮೂಡಿಸಿ ನಮ್ಮಂತೆ ಸಮಾಜಮುಖಿಯನ್ನಾಗಿಸೋಣ ಎಂದು ಸಂಸದ ಎ.ನಾರಾಯಣಸ್ವಾಮಿ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸಂಸದ ಎ.ನಾರಾಯಣಸ್ವಾಮಿ ಟ್ವೀಟ್​

ಶಾಸಕರು, ಸಂಸದರಾಗಲಿ ಹಟ್ಟಿಗಳಿಗೆ, ಕೇರಿಗಳಿಗೆ ಹೋಗಿ ಜನರನ್ನು ಬದಲಾವಣೆ ಮಾಡಲಿಲ್ಲ. ಹಟ್ಟಿಗಳಿಗೆ ಹೋಗಿ ಅಲ್ಲಿ ವಾಸ ಮಾಡುವ ಜನರಿಗೆ ಮೂಲಭೂತ ಸೌಕರ್ಯ ಕೊಟ್ಟು ಬದಲಾವಣೆ ಮಾಡೋಣ ಎಂದು ಸಂಸದ ನಾರಾಯಣಸ್ವಾಮಿ ಪೋಸ್ಟ್ ಹಾಕಿದ್ದಾರೆ.

ಈಚೆಗೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪರಮನಹಳ್ಳಿ ಗೊಲ್ಲರಹಟ್ಟಿ ಗ್ರಾಮಕ್ಕೆ ಸಂಸದ ಎ.ನಾರಾಯಣಸ್ವಾಮಿ ಪ್ರವೇಶಕ್ಕೆ ನಿರಾಕರಿಸಿದ್ದರು.

ಗಡಿಪಾರಿಗೆ ಮನವಿ:ಸಂಸದ ಎ.ನಾರಾಯಣಸ್ವಾಮಿಯವರಿಗೆ ಪ್ರವೇಶ ನಿರಾಕರಿಸಿದ ಪರಮನಹಳ್ಳಿಯ ಕಿಡಿಗೇಡಿಗಳಿಗೆ ಕಾನೂನು ಕ್ರಮ ಜರುಗಿಸಿ, ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಕುಮಾರ್ ಎಂಬುವರೊಬ್ಬರು ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವವರಿಗೆ ಮನವಿ ಸಲ್ಲಿಸಿದ್ದಾರೆ.

ABOUT THE AUTHOR

...view details