ಚಿತ್ರದುರ್ಗ: ಕೇಂದ್ರ ಸರ್ಕಾರ ನೆರೆ ಪರಿಹಾರ ವರದಿ ತಿರಸ್ಕರಿಸಿದರೆ ನಾನೇನು ಮಾಡೋಕಾಗಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದು ಮುರುಘಾ ಮಠಕ್ಕೆ ತೆರಳುವ ಮುನ್ನ ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಕಳುಹಿಸಿದ್ದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ರೆ ನಾನೇನು ಮಾಡೋಕಾಗದು ಎಂದು ಉತ್ತರಿಸಿದರು.
ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ಗೆ ನೋಟಿಸ್ ನೀಡಿರುವ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ತಿಳಿಸಿದ್ರು.
ನೆರೆ ಪರಿಹಾರ ವರದಿ ತಿರಸ್ಕರಿಸಿದ್ರೆ ನಾನೇನೂ ಮಾಡೋಕಾಗಲ್ಲ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ನೆರೆ ಪರಿಹಾರದ ಬಗ್ಗೆ ಚರ್ಚಿಸಿದ್ದೇನೆ, ಕರ್ನಾಟಕದ ಅಧಿಕಾರಿಗಳ ಜತೆ ಸಭೆ ಕೂಡ ನಡೆಸಿದ್ದೇನೆ. ವಿಜಯದಶಮಿ ಹಬ್ಬ ಹಿನ್ನೆಲೆ ಪರಿಹಾರ ಕಾರ್ಯ ವಿಳಂಬವಾಗಿದ್ದು, ಹಬ್ಬದ ಬಳಿಕ ನೆರೆ ಸಂತ್ರಸ್ತರಿಗೆ ಪರಿಹಾರ ಸಿಗುವ ವಿಶ್ವಾಸವಿದೆ ಎಂದರು.