ಕರ್ನಾಟಕ

karnataka

ETV Bharat / state

ಚಿಕಿತ್ಸೆಗೆ ರೋಗಿಗಳಿಂದ ಹಣ ಪಡೆದಿಲ್ಲ: ವೈದ್ಯ ಜಯರಾಮ ಸ್ಪಷ್ಟನೆ

ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಬ್ರೋಕರ್‌ಗಳ ಮೂಲಕ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಕುರಿತಂತೆ ವರದಿಗಳು ಬಿತ್ತರವಾಗಿದ್ದವು. ಇದಕ್ಕೆ ಆಸ್ಪತ್ರೆಯ ಕೀಲು ಮತ್ತು ಮೂಳೆ ತಜ್ಞ ಡಾ‌.‌ಜಯರಾಮ ಪ್ರತಿಕ್ರಿಯಿಸಿದ್ದು, ನಾನು ಚಿಕಿತ್ಸೆ ನೀಡಲು ರೋಗಿಗಳ ಸಂಬಂಧಿಗಳಿಂದ ಹಣ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವೈದ್ಯ ಜಯರಾಮ
Doctor Jayaram

By

Published : Jan 10, 2021, 12:17 PM IST

ಚಿತ್ರದುರ್ಗ:ಜಿಲ್ಲಾಸ್ಪತ್ರೆಯಲ್ಲಿ ಬ್ರೋಕರ್‌ಗಳ ಮೂಲಕ ವೈದ್ಯರು ಹಣ ಪಡೆದು ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಆರೋಪಗಳ ಕುರಿತ ವರದಿಗಳು ಬಿತ್ತರವಾಗಿದ್ದವು. ಇದಕ್ಕೆ ಜಿಲ್ಲಾಸ್ಪತ್ರೆಯ ಕೀಲು ಮತ್ತು ಮೂಳೆ ತಜ್ಞ ಡಾ‌.‌ ಜಯರಾಮ ಪ್ರತಿಕ್ರಿಯಿಸಿದ್ದು, ನಾನು ಚಿಕಿತ್ಸೆ ನೀಡಲು ರೋಗಿಗಳ ಸಂಬಂಧಿಗಳಿಂದ ಹಣ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಜಿಲ್ಲಾಸ್ಪತ್ರೆಯ ಕೀಲು ಮತ್ತು ಮೂಳೆ ತಜ್ಞ ಡಾ‌.‌ಜಯರಾಮ ಸ್ಪಷ್ಟನೆ

ಈ ಕುರಿತಂತೆ ಮಾತನಾಡಿರುವ ಅವರು, ಆಸ್ಪತ್ರೆಯಲ್ಲಿ ಕೀಲು ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಪ್ಲೇಟ್ಸ್‌ಗಳು ಹಾಗೂ ರಾಡ್‌ಗಳ ಕೊರತೆಯಿದೆ. ಅನಿವಾರ್ಯವಾಗಿ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ರಾಡ್‌ಗಳು ಬೇಕಾಗುತ್ತದೆ. ಅವುಗಳು ದಾವಣಗೆರೆ, ಹುಬ್ಬಳ್ಳಿ, ಮಂಗಳೂರು ರಾಜ್ಯದ ವಿವಿಧ ಕಡೆಗಳಲ್ಲಿ ಸಿಗುತ್ತವೆ. ಹೀಗಾಗಿ ಏಜೆನ್ಸಿ ಮೂಲಕ ರಾಡ್ ತರಿಸಿಕೊಳ್ಳಲಾಗುತ್ತದೆ‌. ನಾನು ಚಿಕಿತ್ಸೆಗಾಗಿ ಹಣ ಪಡೆಕೊಂಡಿಲ್ಲ. ಜಿಲ್ಲೆಯ ಮೆಡಿಕಲ್ಸ್​ಗಳಲ್ಲಿ ಪ್ಲೇಟ್ಸ್, ರಾಡ್ ಒಂದೊಂದೆ ಸಿಗುವುದಿಲ್ಲ. ಬಾಕ್ಸ್ ಮೂಲಕವೇ ಖರೀದಿ ಮಾಡಬೇಕಾಗುತ್ತದೆ ಎಂದರು.

ಓದಿ: 'ಡೀಲ್‌'ಆಸ್ಪತ್ರೆ, ಲಂಚ ಕೊಟ್ರೇ ಡಾಕ್ಟರ್ ದರ್ಶನ!

ಆಸ್ಪತ್ರೆಗೆ ಬಂದ ರೋಗಿಗಳಿಂದ ಬ್ರೋಕರ್ ಮೂಲಕ ಹಣ ಪಡೆದಿಲ್ಲ. ಬದಲಾಗಿ ರೋಗಿಗಳಿಗೆ ತುರ್ತು ಚಿಕಿತ್ಸೆಗಾಗಿ ಏಜೆನ್ಸಿ ಮೂಲಕ ಚಿಕಿತ್ಸಾ ಉಪಕರಣ ತರಿಸಿಕೊಳ್ಳಲಾಗಿದೆ ಎಂದರು.

ಓದಿ: ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಲಂಚ ಪೀಕುತ್ತಿರುವ ವೈದ್ಯರು?... ಇಲ್ಲಿ ಬ್ರೋಕರ್​ಗಳದ್ದೇ ಕಾರುಬಾರು!

ನೀವ್ಯಾಕೆ ರೋಗಿಗಳ ಸಂಬಂಧಿಗಳ ಜೊತೆಗೆ ಮಾತಾಡಿ ಅವರಿಂದ ತರಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ವೈದ್ಯರು, ಎಲ್ಲ ಕೆಲಸವೂ ಒಬ್ಬರಿಂದ ಮಾಡಲು ಆಗೋದಿಲ್ಲ. ನಾನು ರೋಗಿಗಳಿಗೆ ಬರೆದುಕೊಡುವ ಉಪಕರಣಗಳು ಕಂಪನಿಗಳ ಮೂಲಕ ಏಜೆನ್ಸಿಗೆ ಬಂದು ತಲುಪಿರುತ್ತವೆ. ಹೀಗಾಗಿ ರೋಗಿಗಳು ಅಲ್ಲೇ ಖರೀದಿ ಮಾಡಬೇಕಾಗುತ್ತದೆ . ನಾನು ಯಾವುದೇ ರೋಗಿಗಳಿಂದ ಹಣ ಪಡೆದಿಲ್ಲ ಎಂದರು.

ABOUT THE AUTHOR

...view details