ಕರ್ನಾಟಕ

karnataka

ETV Bharat / state

ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ: ಶಾಸಕಿ ಪೂರ್ಣಿಮಾ ಶ್ರೀನಿವಾಸ್ - I am not make labhi by anyone for a ministerial position

ಸಚಿವ ಸ್ಥಾನ ನೀಡಿ ಎಂದು ಯಾರ ಬಳಿಯೂ ಲಾಬಿ ಮಾಡಿಲ್ಲ. ಪಕ್ಷದ ನಿಲುವುಗಳಿಗೆ ಬದ್ಧಳಾಗಿರುವೆ. ಯಾದವ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಕಡೆಗಣನೆ ಮಾಡಿಲ್ಲ. ಹಿಂದುಳಿದ ವರ್ಗಗಳ ಕುರಿತಾಗಿ ಸಿಎಂ ಬಿಎಸ್‌ವೈ‌ ಅವರಿಗೆ ಹಾಗೂ ಪಕ್ಷಕ್ಕೆ ಕಾಳಜಿ ಇದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ.

MLA Purnima Srinivas
ಶಾಸಕಿ ಪೂರ್ಣಿಮಾ ಶ್ರೀನಿವಾಸ್

By

Published : Jan 18, 2021, 5:40 PM IST

Updated : Jan 18, 2021, 6:02 PM IST

ಚಿತ್ರದುರ್ಗ: ಸಚಿವ ಸ್ಥಾನ ಕೊಡಿ ಎಂದು ನಾನು ಯಾರ ಬಳಿಯೂ ಲಾಬಿ ಮಾಡಲು ಹೋಗಿಲ್ಲ.‌ ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುವೆ ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ.

ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್

ಹಿರಿಯೂರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರು ನನಗೆ ಮತ ಹಾಕಿ ಶಾಸಕ ಸ್ಥಾನ ನೀಡಿದ್ದಾರೆ. ಸಚಿವ ಸ್ಥಾನ ನೀಡಿ ಎಂದು ಯಾರ ಬಳಿಯೂ ಲಾಬಿ ಮಾಡಿಲ್ಲ. ಪಕ್ಷದ ನಿಲುವುಗಳಿಗೆ ಬದ್ಧಳಾಗಿರುವೆ. ಯಾದವ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಕಡೆಗಣನೆ ಮಾಡಿಲ್ಲ. ಹಿಂದುಳಿದ ವರ್ಗಗಳ ಕುರಿತಾಗಿ ಸಿಎಂ ಬಿಎಸ್‌ವೈ‌ ಅವರಿಗೆ ಹಾಗೂ ಪಕ್ಷಕ್ಕೆ ಕಾಳಜಿ ಇದೆ. ಆದ್ರೆ ಸಂದರ್ಭಗಳು ಭಿನ್ನವಾಗಿರುವ ಕಾರಣದಿಂದ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಹಿಂದುಳಿದ ವರ್ಗಗಳನ್ನು ಗಮನಿಸುವ ಕಾರ್ಯ ಮಾಡಲಿದೆ ಎಂದು ಶಾಸಕಿ ಪೂರ್ಣಿಮಾ ವಿಶ್ವಾಸ ವ್ಯಕ್ತಪಡಿಸಿದರು.

ಓದಿ:ಬಿಜೆಪಿಯಲ್ಲಿದ್ದು ಮೂಲೆ ಗುಂಪಾಗಿದ್ದೀರಿ, ಕಾಂಗ್ರೆಸ್​ಗೆ ಬನ್ನಿ: ಯತ್ನಾಳ್​ಗೆ ತನ್ವೀರ್ ಸೇಠ್​ ಆಹ್ವಾನ

Last Updated : Jan 18, 2021, 6:02 PM IST

ABOUT THE AUTHOR

...view details