ಚಿತ್ತದುರ್ಗ:ಕೊರೊನಾ ತಡೆಗಾಗಿ ನಿತ್ಯ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಸಾರ್ವಜನಿಕರು ಹೂವಿನ ಸುರಿಮಳೆ ಸುರಿಸುವ ಮೂಲಕ ಗೌರವ ಸೂಚಿಸಿದ್ದಾರೆ.
ಪೊಲೀಸರ ಪರೇಡ್ ವೇಳೆ ಹೂ ಮಳೆ ಸುರಿಸಿದ ಜನ - chitradurga SP Radhika
ಕೊರೊನಾ ತಡೆಗಟ್ಟಲು ಭಾರತ ಲಾಕ್ ಡೌನ್ ಮಾಡಿ ವಿಸ್ತರಣೆ ಕೂಡ ಘೋಷಣೆ ಮಾಡಿದೆ. ಕೊರೊನಾ ವೈರಸ್ ತಡೆಗೆ ಜನರು ಬೀದಿಗೆ ಬರದಂತೆ ಇಂದಿಗೂ ಕೂಡ ಪೊಲೀಸರು ಜನಸಾಮಾನ್ಯರಲ್ಲಿ ಅರಿವು ಮೂಡಿಸುವಲ್ಲಿ ಮಗ್ನರಾಗಿದ್ದಾರೆ.
ಪೊಲೀಸರಿಗೆ ಗೌರವ
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಪೊಲೀಸರು ಪರೇಡ್ ನಡೆಸುವ ಮೂಲಕ ಯಾರೂ ಮನೆಯಿಂದ ಹೊರಬಾರದಂತೆ ಜಾಗೃತಿ ಮೂಡಿಸಿದರು. ಈ ವೇಳೆಯಲ್ಲಿ ಜನರು ಪೊಲೀಸರ ಮೇಲೆ ಹೂ ಮಳೆ ಸುರಿಸಿ ಅದ್ಧೂರಿಯಾದ ಸ್ವಾಗತ ಕೋರಿದ್ದಾರೆ.
ಎಸ್ಪಿ ಜಿ. ರಾಧಿಕಾ ನೇತೃತ್ವದಲ್ಲಿ ಪಟ್ಟಣದಲ್ಲಿ ರೂಟ್ ಮಾರ್ಚ್ ವೇಳೆ ಈ ಹೂ ಮಳೆ ಸುರಿಸಲಾಗಿದ್ದು, ಪೊಲೀಸರಿಗೆ ಕೊರೊನಾ ವಾರಿಯರ್ಸ್ ಎಂದು ಚಪ್ಪಾಳೆ ತಟ್ಟಿ ಜನರು ಹುರಿದುಂಬಿಸಿದ್ದಾರೆ. ಬಳಿಕ ಎಸ್ಪಿ ಜಿ.ರಾಧಿಕಾರವರು ಬಡವರಿಗೆ ದಿನಸಿ ಕಿಟ್ ವಿತರಿಸಿದರು.