ಕರ್ನಾಟಕ

karnataka

By

Published : Sep 18, 2020, 3:05 AM IST

ETV Bharat / state

ಪೋಷಕರ ಬಳಿ ಮಗು ಸೇರಿಸಿ, ಮಾನವೀಯತೆ ಮೆರೆದ ಶಾಸಕಿ ಪೂರ್ಣಿಮಾ

ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನನ್ನು ಪೋಷಕರ ಮಡಿಲಿಗೆ ಸೇರಿಸಿ ಶಾಸಕಿ ಮಾನವೀಯತೆ ಮರೆದಿದ್ದಾರೆ.

Hiriyuru MLA Purnima Srinivas
Hiriyuru MLA Purnima Srinivas

ಚಿತ್ರದುರ್ಗ:ದಾರಿ ತಪ್ಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಮಗುವನ್ನು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪೋಷಕರಿಗೆ ಮರಳಿಸುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಾನವೀಯತೆ ಮೆರೆದ ಶಾಸಕಿ ಪೂರ್ಣಿಮಾ

ರಾಷ್ಟ್ರೀಯ ಹೆದ್ದಾರಿ 4ರ ಇಕ್ಕೆಲದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಗುವನ್ನು ಗಮನಿಸಿ ಎತ್ತಿಕೊಂಡ ಶಾಸಕಿ, ತದನಂತರ ತಾಯಿಯ ಮಡಲಿಗೆ ಮರಳಿಸಿ, ಮಾನವೀಯತೆ ಮೆರೆದಿದ್ದಾರೆ. ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆದಿವಾಲ ಗ್ರಾಮದ ಬಳಿ ನಡೆದಿದೆ.

ಮಗು ತಾಯಿ ಮಡಿಲು ಸೇರಿಸಿದ ಶಾಸಕಿ

ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಒಂಟಿಯಾಗಿ‌ ನಡೆದುಕೊಂಡು ತೆರಳುತ್ತಿದ್ದ ಮಗುವನ್ನು ಕಂಡು ಮೊದಲು ಮಾತನಾಡಿಸಿದ್ದಾರೆ. ಅ ಪುಟ್ಟ ಮಗುವನ್ನು ನೋಡಿ ವಿಳಾಸ ಹಾಗೂ ಪೋಷಕರ ಬಗ್ಗೆ ಕೇಳಿದ್ದಾರೆ. ಪುಟ್ಟ ಮಗು ಮಾತನಾಡಲು ತಡವಾರಿಸಿದಾಗ ಯಾರ್ದಪ್ಪೋ‌ ಈ ಮಗು ಎಂದು ಕೂಗಿದಾಗ ಅಲ್ಲೇ ದೂರದಲ್ಲಿ ಕೆಲಸ‌‌ ಮಾಡುತ್ತಿದ್ದ ಮಗುವಿನ ಪೋಷಕರು ದೌಡಾಯಿಸಿ ಮಗು ನಮ್ಮದು‌‌ ಎಂದು ಹೇಳಿದ್ದಾರೆ. ಈ ವೇಳೆ ಮಗುವನ್ನು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಒಪ್ಪಿಸಿ ಮಾನವೀಯತೆ ಮೆರೆದರು.

ABOUT THE AUTHOR

...view details