ಚಿತ್ರದುರ್ಗ:ಹಿರಿಯೂರು ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯ ದಾದಾಪೀರ್ ಕೊರೊನಾಗೆ ಬಲಿಯಾಗಿದ್ದಾರೆ.
ಹಿರಿಯೂರು ಕಾಂಗ್ರೆಸ್ ಪಕ್ಷದ ನಗದಸಭೆ ಸದಸ್ಯ ಕೊರೊನಾಗೆ ಬಲಿ - ಚಿತ್ರದುರ್ಗ ಕೊರೊನಾ ಲೆಟೆಸ್ಟ್ ನ್ಯೂಸ್
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯ ದಾದಾಪೀರ್ ಕೊರೊನಾದಿಂದ ಮೃತಪಟ್ಟಿದ್ದಾರೆ.
ನಗದಸಭೆ ಸದಸ್ಯ ದಾದಾಪೀರ್
ಜಿಲ್ಲೆಯ ಹಿರಿಯೂರು ಪಟ್ಟಣದ ನಿವಾಸಿ ಹಾಗೂ 15 ನೇ ವಾರ್ಡಿನ ಸದಸ್ಯರಾಗಿರುವ 40 ವರ್ಷದ ದಾದಾಪೀರ್ ಅವರಿಗೆ ಆಗಸ್ಟ್ .7 ರಂದು ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಇಡೀ ಕುಟುಂಬ ಆಸ್ಪತ್ರೆಗೆ ದಾಖಲಾಗಿತ್ತು.
ಆದರೆ ದಾದಾಪೀರ್ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ಅವರನ್ನು ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಿಂದ ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಹಿರಿಯೂರಿನ ಬಳಿ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.