ಕರ್ನಾಟಕ

karnataka

ETV Bharat / state

ಕುರಿ-ಮೇಕೆ ಆಕಸ್ಮಿಕ ಸಾವಿನ ಪರಿಹಾರ ರದ್ದುಪಡಿಸದಂತೆ ಸಿಎಂಗೆ ಪತ್ರ ಬರೆದ ಹಿರಿಯೂರು ಶಾಸಕಿ

ಸಿಡಿಲು ಹಾಗೂ ಇನ್ನಿತರ ಘಟನೆಗಳಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪುವ ಕುರಿ-ಮೇಕೆಗಳ ಮಾಲೀಕರಿಗೆ ನೀಡುತ್ತಿದ್ದ ಪರಿಹಾರಧನವನ್ನು ರದ್ದುಪಡಿಸದಂತೆ ಸಿಎಂ ಯಡಿಯೂರಪ್ಪನವರಿಗೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪತ್ರ ಬರೆದಿದ್ದಾರೆ.

Hiriyur MLA to CM repeal accidental sheep-goat death compensation
ಆಕಸ್ಮಿಕ ಕುರಿ-ಮೇಕೆ ಸಾವಿನ ಪರಿಹಾರ ರದ್ದುಪಡಿಸದಂತೆ ಸಿಎಂಗೆ ಪತ್ರ ಬರೆದ ಹಿರಿಯೂರು ಶಾಸಕಿ..!

By

Published : Apr 19, 2020, 4:54 PM IST

ಹಿರಿಯೂರು:ಸಿಡಿಲು ಹಾಗೂ ಇನ್ನಿತರ ಘಟನೆಗಳಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪುವ ಕುರಿ-ಮೇಕೆಗಳ ಮಾಲೀಕರಿಗೆ ನೀಡುತ್ತಿದ್ದ ಪರಿಹಾರಧನವನ್ನು ರದ್ದುಪಡಿಸದಂತೆ ಸಿಎಂ ಯಡಿಯೂರಪ್ಪನವರಿಗೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪತ್ರ ಬರೆದಿದ್ದಾರೆ.

ಕುರಿ-ಮೇಕೆ ಸಾವಿನ ಪರಿಹಾರ ರದ್ದುಪಡಿಸದಂತೆ ಸಿಎಂಗೆ ಪತ್ರ ಬರೆದ ಹಿರಿಯೂರು ಶಾಸಕಿ

ಆಕಸ್ಮಿಕವಾಗಿ ಸಾವನ್ನಪ್ಪುವ ಕುರಿ ಮೇಕೆಗಳಿಗೆ ನೀಡುತ್ತಿದ್ದ 5000 ರೂ. ಪರಿಹಾರಧನವನ್ನು ನಿಲ್ಲಿಸಲು ಸರ್ಕಾರ ನಿರ್ಧರಿಸಿದ್ದು, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪತ್ರ ಬರೆಯುವ ಮೂಲಕ ಸಿಎಂ ಹಾಗೂ ಪಶು ಸಂಗೋಪನಾ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ. ಕುರಿ ಹಾಗೂ ಮೇಕೆಗಳು ಆಕಸ್ಮಿಕ ಮರಣ ಹೊಂದಿದರೆ ಕುರಿಗಾಹಿಗಳಿಂದ ಅರ್ಜಿಗಳನ್ನು ಸ್ವೀಕರಿಸದೇ ಇರುವುದು ಸೂಕ್ತವೆಂದು ಈಗಾಗಲೇ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಅದರೆ ಈ ಕುರಿ ಸಾಕಾಣಿಕೆ ಬರಪೀಡಿತ ಜಿಲ್ಲೆ ಚಿತ್ರದುರ್ಗದ ಹಲವು ಕಡುಬಡವರ ಮುಖ್ಯ ಕಸುಬಾಗಿದ್ದು, ಅವರು ಭೂ ರಹಿತರಾಗಿರುತ್ತಾರೆ. ಅದ್ದರಿಂದ 5000 ರೂ. ಪರಿಹಾರ ನೀಡುವ ಸರ್ಕಾರದ ಈ ಬಡವರ ಪಾಲಿನ ಯೋಜನೆ ಮುಂದುವರೆಸಬೇಕೆಂದು ಶಾಸಕಿ ಮನವಿ ಮಾಡಿದ್ದಾರೆ.

ABOUT THE AUTHOR

...view details