ಚಿತ್ರದುರ್ಗ: ಹಿರಿಯೂರು ಪಟ್ಟಣದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಹಾಟ್ಸ್ಪಾಟ್ ಆಗುತ್ತಿದೆಯೇ ಎಂಬ ಅನುಮಾನ ಇದೀಗ ಮೂಡುತ್ತಿದೆ.
ಕೊರೊನಾ ಹಾಟ್ಸ್ಪಾಟ್ ಆಗುತ್ತಿದೆಯೇ ಹಿರಿಯೂರು: ಎರಡು ಏರಿಯಾಗಳು ಸೀಲ್‌ಡೌನ್ - Corona
ಚಿತ್ರದುರ್ಗದ ಹಿರಿಯೂರು ಪಟ್ಟಣದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ಎರಡು ಪ್ರದೇಶಗಳನ್ನು ಸೀಲ್‌ಡೌನ್ ಮಾಡಿದ್ದಾರೆ.
![ಕೊರೊನಾ ಹಾಟ್ಸ್ಪಾಟ್ ಆಗುತ್ತಿದೆಯೇ ಹಿರಿಯೂರು: ಎರಡು ಏರಿಯಾಗಳು ಸೀಲ್‌ಡೌನ್ ಕೊರೊನಾ ಹಾಟ್ ಸ್ಪಾಟ್ ಆಗುತ್ತಿದೆಯೇ ಹಿರಿಯೂರು..!](https://etvbharatimages.akamaized.net/etvbharat/prod-images/768-512-7775459-thumbnail-3x2-mng.jpg)
ಕೊರೊನಾ ಹಾಟ್ ಸ್ಪಾಟ್ ಆಗುತ್ತಿದೆಯೇ ಹಿರಿಯೂರು..!
ಕೊರೊನಾ ಹಾಟ್ ಸ್ಪಾಟ್ ಆಗುತ್ತಿದೆಯೇ ಹಿರಿಯೂರು..!
ಕೊರೊನಾದಿಂದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಿರಿಯೂರು ನಗರದಲ್ಲಿರುವ ಎರಡು ಏರಿಯಾಗಳನ್ನು ಸೀಲ್‌ಡೌನ್ ಮಾಡಿದ್ದಾರೆ. ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಹಿರಿಯೂರು ಪಟ್ಟಣದ ಆಜಾದ್ ನಗರ ಸೇರಿದಂತೆ ವೇದಾವತಿ ನಗರವನ್ನು ಸೀಲ್‌ಡೌನ್ ಮಾಡಲಾಗಿದೆ.
ತಾಯಿ - ಮಗನಿಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಆಜಾದ್ ನಗರದ ನಿವಾಸ ಬಳಿಯ ರಸ್ತೆ ಸೀಲ್‌ಡೌನ್ ಮಾಡಲಾಗಿದ್ದು, ವೈದ್ಯ ಹಾಗೂ ವೃದ್ಧನಿಗೆ ಸೋಂಕು ತಗುಲಿರುವುದು ಖಾತ್ರಿಯಾದ ಬೆನ್ನಲ್ಲೇ ಹಿರಿಯೂರಿನ ವೇದಾವತಿ ನಗರದ ನಿವಾಸದ ಬಳಿಯ ರಸ್ತೆಯನ್ನು ಸೀಲ್‌ಡೌನ್ ಮಾಡಿದ್ದಾರೆ.