ಚಿತ್ರದುರ್ಗ: ಪ್ರತಿವರ್ಷ ಸಾಕಷ್ಟು ವೈಭವದಿಂದ ನಡೆಯುತ್ತಿದ್ದ ಹಿಂದೂ ಮಹಾಗಣಪತಿ ನಿಮಜ್ಜನ ಕಾರ್ಯಕ್ರಮ ಈ ಬಾರಿ ಕೊರೊನಾ ಎಫೆಕ್ಟ್ನಿಂದ ಸರಳವಾಗಿ ಶೋಭಯಾತ್ರೆ ಇಲ್ಲದೆ ನಡೆಯಲಿದೆ.
ಇಂದು ಕೋಟೆನಾಡಲ್ಲಿ ಸರಳವಾಗಿ ಹಿಂದೂ ಮಹಾಗಣಪತಿಯ ನಿಮಜ್ಜನ - Today is the immersion of the Hindu Mahantapa in Chitradurga
ಕೊರೊನಾ ಎಫೆಕ್ಟ್ನಿಂದ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಹಿಂದೂ ಮಹಾಗಣಪತಿಯ ನಿಮಜ್ಜನ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ನೆರವೇರಿಸಲು ನಿರ್ಧರಿಸಲಾಗಿದೆ..
ಸರಳವಾಗಿ ಹಿಂದೂ ಮಹಾಗಣಪತಿಯ ನಿಮಜ್ಜನ
ಶೋಭಾ ಯಾತ್ರೆ ಬದಲಾಗಿ 100 ಜನರ ಸಾಂಕೇತಿಕವಾಗಿ ಯಾತ್ರೆಯಲ್ಲಿರ್ತಾರೆ. ಜನ ಸೇರದಂತೆ ಪೊಲೀಸ್ ಇಲಾಖೆ ನಿಗಾ ವಹಸಿದೆ. ಗಣಪತಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಪೋಲ್ಸ್ಗಳನ್ನು ಕಟ್ಟಲಾಗಿದ್ದು, ಮುಂಜಾಗ್ರತ ಕ್ರಮವಾಗಿ ಎಸ್ಪಿ ಜಿ.ರಾಧಿಕಾ ನೇತೃತ್ವದಲ್ಲಿ ಪರೇಡ್ ನಡೆಸಲಾಗಿದೆ.
ಈಗಾಗಲೇ ಜಿಲ್ಲಾಡಳಿತ ಸರಳ ಶೋಭಾ ಯಾತ್ರೆಯಲ್ಲಿ ನಾದ ಸ್ವರಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು, ಯಾವುದೇ ಡೊಳ್ಳು ಕುಣಿತ, ಸ್ಪೀಕರ್ಗಳಿಗೆ ಅನುಮತಿ ನೀಡಿಲ್ಲ. ಯಾತ್ರೆಯಲ್ಲಿ ಕಾರ್ಯಕರ್ತರು ಹಾಗೂ ಸಮಿತಿಯವರು ಪಾಲ್ಗೊಳ್ಳಲು ಮಾತ್ರ ಅವಕಾಶವಿದೆ. ಮಧ್ಯಾಹ್ನ 3 ಗಂಟೆಗೆ ನಿಮಜ್ಜನ ಯಾತ್ರೆ ಆರಂಭವಾಗಲಿದೆ.