ಚಿತ್ರದುರ್ಗ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಮಲೆ ಮಹದೇಶ್ವರ ಬೆಟ್ಟದಿಂದ ಪಾದಯಾತ್ರೆ ಹೊರಟಿರುವ ಬಾಗಲಕೋಟೆ ಮೂಲದ ನಾಗರಾಜ್ ಕಲ್ಲು ಕುಟಿಕರ್ ಅವರು ಜಿಲ್ಲೆಯ ಹಿರಿಯೂರು ತಲುಪಿದ್ದಾರೆ.
ರೈತರ ಹೋರಾಟ ಬೆಂಬಲಿಸಿ ಮಲೆ ಮಹದೇಶ್ವರ ಬೆಟ್ಟದಿಂದ ಪಾದಯಾತ್ರೆ: ಹಿರಿಯೂರು ತಲುಪಿದ ನಾಗರಾಜ್ - Hike from Male Mahadeshwara hill
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಮಲೆ ಮಹದೇಶ್ವರ ಬೆಟ್ಟದಿಂದ ಪಾದಯಾತ್ರೆ ಹೊರಟಿರುವ ಬಾಗಲಕೋಟೆ ಮೂಲದ ನಾಗರಾಜ್ ಕಲ್ಲು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಲುಪಿದ್ದಾರೆ. ನಂತರ ಆದಿಜಾಂಬವ ಮಠಕ್ಕೆ ಭೇಟಿ ನೀಡಿ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿಯ ಆಶೀರ್ವಾದ ಪಡೆದಿದ್ದಾರೆ.
ಹಿರಿಯೂರು ನಗರದ ರೈತರನ್ನು ಭೇಟಿ ಮಾಡಿ ನಂತರ ಆದಿಜಾಂಬವ ಮಠಕ್ಕೆ ಭೇಟಿ ನೀಡಿ ಷಡಕ್ಷರಿ ಮುನಿ ದೇಶಿಕೆಂದ್ರ ಸ್ವಾಮೀಜಿಯ ಆಶೀರ್ವಾದ ಪಡೆದರು. ರೈತರ ಬದುಕಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ದೆಹಲಿಯಲ್ಲಿ ಮಳೆ ಬಿಸಿಲು ಲೆಕ್ಕಿಸದೆ ಹೋರಾಟ ನಡೆಸುತ್ತಿರುವ ರೈತರಿಗೆ ಧೈರ್ಯ ತುಂಬಬೇಕಾದುದು ನಾಡಿನ ಎಲ್ಲಾ ರೈತರ ಆದ್ಯ ಕರ್ತವ್ಯ. ಹೀಗಾಗಿ ರೈತರಲ್ಲಿ ಜಾಗೃತಿ ಮೂಡಿಸುವ ಕಾರಣಕ್ಕೆ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಹೇಳಿದರು.
ಕೋವಿಡ್ ಎರಡನೇ ಅಲೆ ದೇಶದಲ್ಲಿ ವ್ಯಾಪಾಕವಾಗಿ ಹರಡುತ್ತಿದ್ದು, ಪಾದಯಾತ್ರೆ ಸಮಯದಲ್ಲಿ ತುಂಬ ಎಚ್ಚರ ವಹಿಸಬೇಕಾಗಿದೆ. ನಿಮ್ಮ ಪಾದಯಾತ್ರೆ ಫಲಿಸಲಿ ಎಂದು ಸ್ವಾಮೀಜಿ ಹೇಳಿದ್ದಾರೆ.