ಕರ್ನಾಟಕ

karnataka

ETV Bharat / state

ಹೈಕಮಾಂಡ್​​ ಯಾರಿಗೆ ಮೂಗುದಾರ ಹಾಕಬೇಕೋ ಹಾಕುತ್ತಾರೆ.. ಸಚಿವ ಕೆ ಗೋಪಾಲಯ್ಯ

ವಿಧಾನ ಪರಿಷತ್​ ಹಾಗೂ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿಯಲ್ಲಿ ನಡೆಯುತ್ತಿರುವ ಲಾಬಿ ಕುರಿತು ಸಚಿವ ಕೆ ಗೋಪಾಲಯ್ಯ ಮಾತನಾಡಿದ್ದು, ಹೈಕಮಾಂಡ್​ ಯಾರಿಗೆ ಮೂಗುದಾರ ಹಾಕಬೇಕೋ ಅವರಿಗೆ ಹಾಕುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಪಕ್ಷವಾಗಿದೆ ಎಂದಿದ್ದಾರೆ.

High Command will take action on rebbels: Minister Gopalaliah
ಹೈಕಮಾಂಡ್​​ ಯಾರಿಗೆ ಮೂಗುದಾರ ಹಾಕಬೇಕೋ ಹಾಕುತ್ತಾರೆ: ಸಚಿವ ಗೋಪಾಲಯ್ಯ

By

Published : Jun 6, 2020, 8:43 PM IST

ಚಿತ್ರದುರ್ಗ :ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಪಕ್ಷ. ಹೈಕಮಾಂಡ್​​ನಿಂದ ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವ ಮೂಲಕ ಯಾರಿಗೆ ಮೂಗುದಾರ ಹಾಕಬೇಕೋ ಹಾಕುತ್ತಾರೆ ಎಂದು ಆಹಾರ ಸಚಿವ ಕೆ‌ ಗೋಪಾಲಯ್ಯ ಹೇಳಿದ್ದಾರೆ. ಮಾಜಿ ಸಚಿವರುಗಳಾದ ಹೆಚ್ ವಿಶ್ವನಾಥ್, ಎಂಟಿಬಿ, ಆರ್ ಶಂಕರ್​​ ಅವರಿಗೆ ಸೂಕ್ತ ಸ್ಥಾನಮಾನ ಕುರಿತು ಪ್ರತಿಕ್ರಿಯಿಸಿದರು.

ಹೈಕಮಾಂಡ್​​ ಯಾರಿಗೆ ಮೂಗುದಾರ ಹಾಕಬೇಕೋ ಹಾಕುತ್ತಾರೆ.. ಸಚಿವ ಗೋಪಾಲಯ್ಯ

ಆಧಾರ್ ಕಾರ್ಡ್ ಇದ್ದರೆ ಸಾಕು ಕಡುಬಡವರಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಗೊಂದಲಕ್ಕೆ ತೆರೆ ಎಳೆದರು. ಮಹಾರಾಷ್ಟ್ರದಿಂದ ಬಂದ ಭಾಗಶಃ ಜನರಲ್ಲಿ ಕೊರೊನಾ ಪತ್ತೆಯಾಗ್ತಿವೆ. ಸ್ಥಳೀಯರಲ್ಲಿ ಈವರೆಗೆ 150 ಜನರಿಗೂ ಕೊರೊನಾ ಕಾಣಿಸಿಕೊಂಡಿಲ್ಲ.

ರಾಜ್ಯದಿಂದ ಹೊರ ರಾಜ್ಯಕ್ಕೆ ಹೋಗಿದ್ದಾರೆ. ಹೊರ ರಾಜ್ಯದಿಂದ ಇಲ್ಲಿಗೂ ಬಂದಿದ್ದಾರೆ. ಎಲ್ಲರೂ ನಮ್ಮವರೇ ಆಗಿದ್ದು, ನಮ್ಮ ಊರನ್ನು ಸುಸ್ಥಿತಿಯಲ್ಲಿಡುವುದು ನಮ್ಮ ಕರ್ತವ್ಯವಾಗಿದೆ ಎಂದು ಕೊರೊನಾ ವಿರುದ್ಧ ಹೋರಾಡುತ್ತಿರುವ ಸರ್ಕಾರದ ಪರ ಬ್ಯಾಟ್ ಬೀಸಿದರು.

ABOUT THE AUTHOR

...view details