ಚಿತ್ರದುರ್ಗ: ನಗರದಲ್ಲಿ ಸಂಜೆಯಿಂದ ಏಕಾಏಕಿ ವರುಣನ ಆರ್ಭಟ ಮುಂದುವರೆದಿದೆ. ವರ್ಷದ ಪ್ರಥಮ ಮಳೆ ಸುರಿಯುತ್ತಿದ್ದು, ಬಿಸಿಲಿನಿಂದ ಕಾದಿದ್ದ ಭೂಮಿ ತಂಪಾಗಿದೆ. ಇತ್ತ ಹಿಂಗಾರು ಮಳೆಯಿಂದಾಗಿ ತೊಗರಿ ಹಾಗೂ ಕಡಲೆ ಬೆಳೆ ಈಗಾಗಲೇ ಕಟಾವಿನ ಹಂತಕ್ಕೆ ಬಂದಿದ್ದು, ಕೃಷಿಕರ ಆತಂಕಕ್ಕೂ ಕಾರಣವಾಗಿದೆ.
ಬಿಸಿಲಿನಿಂದ ಕಾದಿದ್ದ ಕೋಟೆನಾಡಿಗೆ ತಂಪೆರೆದ ವರ್ಷದ ಮೊದಲ ಮಳೆ - ಚಿತ್ರದುರ್ಗದಲ್ಲಿ ಮಳೆ
ರಾಜ್ಯದ ಬಹುತೇಕ ಕಡೆಗಳಲ್ಲಿ ಇಂದು ವರುಣ ತಂಪೆರೆದಿದ್ದಾನೆ. ಕೋಟೆನಾಡು ಚಿತ್ರದುರ್ಗದಲ್ಲಿಯೂ ವರುಣ ಅಬ್ಬರಿಸಿದ್ದು, ಸಂಜೆ ವೇಳೆಗೆ ಅಬ್ಬರ ಜೋರಾಗಿತ್ತು.
ಬಿಸಿಲಿನಿಂದ ಕಾದಿದ್ದ ಕೋಟೆನಾಡಿಗೆ ತಂಪೆರೆದ ವರ್ಷದ ಮೊದಲ ಮಳೆ
ನಗರದಲ್ಲಿ ಮಳೆಯಾಗುತ್ತಿರುವುದಕ್ಕೆ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಟ ನಡೆಸುವಂತಾಗಿತ್ತು. ಇತ್ತ ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ದಿನವಿಡೀ ಬಿಡದ ವರುಣ: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ ಸಾಧ್ಯತೆ!