ಕರ್ನಾಟಕ

karnataka

ETV Bharat / state

ಬರದ ನಾಡಿನಲ್ಲಿ ರೈತರಿಗೆ ಬರೆ ಎಳೆದ ಮಳೆರಾಯ..

ಮಳೆಯಿಂದಾಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಸಂಪೂರ್ಣ ಬೆಳೆ ನೆಲಕಚ್ಚಿದ್ದರಿಂದ ರೈತರು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

heavy rain in chitradurga, corp destroy
ಬರದ ನಾಡಿನಲ್ಲಿ ರೈತರಿಗೆ ಬರೆ ಎಳೆದ ಮಳೆರಾಯ

By

Published : Apr 9, 2020, 5:31 PM IST

ಚಿತ್ರದುರ್ಗ :ಮಳೆಯ ಆಗಮನದಿಂದ ಸಂತಸದಲ್ಲಿದ್ದ ಕೋಟೆನಾಡಿನ ರೈತರಿಗೆ ಮಳೆರಾಯ ಅವಾಂತರ ಸೃಷ್ಟಿಸಿ ಕೈಗೆ ಬಂದ ಬೆಳೆ ನೆಲಕಚ್ಚುವಂತೆ ಮಾಡಿದ್ದಾನೆ. ಬರದನಾಡಿನಲ್ಲಿ ಅಕಾಲಿಕ ಮಳೆಯಿಂದಾಗಿ ಚಳ್ಳಕೆರೆ ತಾಲೂಕಿನ ತಿಮ್ಮಣ್ಣ ನಾಯಕನ ಕೋಟೆ ಗ್ರಾಮದಲ್ಲಿ ರೈತರು ಕಷ್ಟಪಟ್ಟು ಬೆಳೆದಿದ್ದ ಬೆಳೆ ಸಂಪೂರ್ಣ ನೆಲಕಚ್ಚಿದೆ.

ಕಟಾವ್‌ಗೆ ಬಂದಿದ್ದ ಹತ್ತಾರು ಎಕರೆ ಅಡಿಕೆ ಹಾಗೂ ಎಲೆಬಳ್ಳಿ ಬೆಳೆ ಆಲಿಕಲ್ಲು ಸಹಿತ ಮಳೆಯ ಹೊಡೆತಕ್ಕೆ ಕೊಚ್ಚಿಹೋಗಿದೆ. ರೈತರಾದ ಬಸವರಾಜು, ಮೂರ್ತಪ್ಪ, ಪಾಲಣ್ಣ ಎಂಬುವರಿಗೆ ಸೇರಿದ ತೋಟದಲ್ಲಿ ಈ ಅವಘಡ ಸಂಭವಿಸಿದೆ.

ಮಳೆಯಿಂದಾಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಸಂಪೂರ್ಣ ಬೆಳೆ ನೆಲಕಚ್ಚಿದ್ದರಿಂದ ರೈತರು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ABOUT THE AUTHOR

...view details