ಚಿತ್ರದುರ್ಗ:ಮೊಳಕಾಲ್ಮೂರು ತಾಲೂಕು ಆಸ್ಪತ್ರೆ ಆವರಣದಲ್ಲಿ ರೋಟೋ ವೈರಸ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಅವರು ತಡವಾಗಿ ಆಗಮಿಸಿದ್ದು, ಸಚಿವರಿಗಾಗಿ ಕಾದು ಕಾದು ಮಕ್ಕಳು ಹಾಗೂ ಬಾಣಂತಿಯರು ಸುಸ್ತಾದ ಘಟನೆ ನಡೆದಿದೆ.
ಕಾರ್ಯಕ್ರಮಕ್ಕೆ ತಡವಾಗಿ ಬಂದ ಶ್ರೀರಾಮುಲು.. ಸಚಿವರಿಗಾಗಿ ಕಾದು ಸುಸ್ತಾದ ಬಾಣಂತಿಯರು.. - ರೋಟೋ ವೈರಸ್ ಲಸಿಕೆ
ಮೊಳಕಾಲ್ಮೂರು ತಾಲೂಕು ಆಸ್ಪತ್ರೆ ಆವರಣದಲ್ಲಿ ರೋಟೋ ವೈರಸ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ತಡವಾಗಿ ಆಗಮಿಸಿದ್ದು, ಸಚಿವರಿಗಾಗಿ ಕಾದು ಕಾದು ಮಕ್ಕಳು ಹಾಗೂ ಬಾಣಂತಿಯರು ಸುಸ್ತಾದ ಘಟನೆ ನಡೆದಿದೆ.
ಮೊಳಕಾಲ್ಮೂರು ತಾಲೂಕು ಆಸ್ಪತ್ರೆ ಆವರಣದಲ್ಲಿ ರೋಟೋ ವೈರಸ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಸುಮಾರು 11 ಗಂಟೆಗೆ ಆಗಮಿಸಬೇಕಿದ್ದ ಆರೋಗ್ಯ ಸಚಿವ ಶ್ರೀ ರಾಮುಲು ಮಧ್ಯಾಹ್ನ 1:40ಕ್ಕೆ ಆಗಮಿಸಿದ್ದಾರೆ. ಇನ್ನೂ ತಮ್ಮ ಮಕ್ಕಳಿಗೆ ರೋಟೋ ವೈರಸ್ ಹಾಕಿಸಲೆಂದು ಬಂದಿದ್ದ ಬಾಣಂತಿಯರು ಮತ್ತು ಪುಟ್ಟ ಮಕ್ಕಳು ಸಚಿವರಿಗಾಗಿ ಕಾದು ಕಾದು ಸುಸ್ತಾಗಿ ಕೆಲವರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೂ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರು ಬಾಣಂತಿಯರಿಗೆ ಹಾಗೂ ನೆರೆದಿದ್ದ ಜನರಿಗೆ ಕ್ಷಮೆಯಾಚಿಸಿ ಪುಟ್ಟ ಕಂದಮ್ಮಗಳಿಗೆ ಲಸಿಕೆ ಹಾಕಿದರು.