ಚಿತ್ರದುರ್ಗ: ಯಾರಿಗೆ ಗಟ್ಟಿ ದ್ವನಿ ಇರುತ್ತೋ ಅವನು ಒಂಟಿ ಆಗುತ್ತಾನೆ. ನನ್ನ ಸ್ನೇಹಿತರು ನನ್ನನ್ನು ಒಂಟಿ ಮಾಡಿ ಹೋದರು. ಆದರೆ, ನಾನು ಒಂಟಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ನಾನು ಒಂಟಿ ಅಲ್ಲ. ರಾಜ್ಯದ ಜನ ನನ್ನ ಜೊತೆಗಿದ್ದಾರೆ. ನನ್ನ 17 ಜನ ಸ್ನೇಹಿತರು ಬಿಡಿ, ಮಂತ್ರಿ ಆಗುತ್ತಾರೆ. ಅಷ್ಟಕ್ಕೆ ಸಿಮೀತ. ಆದರೆ ನಾನು ವಾಸ್ತವದ ನೆಲೆಗಟ್ಟಿನಲ್ಲಿ ಮಾತನಾಡುತ್ತ ಬಂದವನು ಎಂದರು.