ಕರ್ನಾಟಕ

karnataka

ETV Bharat / state

ಅತ್ತ ಕೊರೊನಾ ತಡೆಯಲು ಸರ್ಕಾರದ ಸರ್ಕಸ್... ಇತ್ತ ರೇಷನ್​ಗಾಗಿ ಮುಗಿಬಿದ್ದ ಜನ! - Chitradurga latest news

ಚಿತ್ರದುರ್ಗದ ತಾಲೂಕಿನ ಗುಡ್ಡದ ರಂಗವ್ವನಹಳ್ಳಿಯಲ್ಲಿ ಜನರು ಸಮಾಜಿಕ ಅಂತರ ಕಾಯ್ದುಕೊಳ್ಳದೆ ನ್ಯಾಯಬೆಲೆ ಅಂಗಡಿ ಮುಂದೆ ರೇಷನ್ ಖರೀದಿಸಲು ಮುಗಿಬಿದ್ದಿದ್ದರು.

ration shop
ನ್ಯಾಯಬೆಲೆ ಅಂಗಡಿ

By

Published : Apr 11, 2020, 5:24 PM IST

ಚಿತ್ರದುರ್ಗ:ಕೋವಿಡ್-19 ತಡೆಗಟ್ಟಲು ರಾಜ್ಯ ಸರ್ಕಾರ ಸಾಕಷ್ಟು ಸರ್ಕಸ್ ಮಾಡುತ್ತಿದ್ದು, ಲಾಕ್​​ಡೌನ್ ಕೂಡ ಮಾಡಿದೆ. ಆದರೆ ಜನ ಮಾತ್ರ ವೈರಸ್ ಭೀತಿ ಇಲ್ಲದೆ ಸಾಮಾಜಿಕ ಅಂತರ ಕಾಪಾಡದೆ ರೇಷನ್​ಗಾಗಿ ಮುಗಿಬಿದ್ದಿದ್ದಾರೆ.

ರೇಷನ್​ಗಾಗಿ ಮುಗಿಬಿದ್ದಿರುವ ಜನ

ಚಿತ್ರದುರ್ಗದ ತಾಲೂಕಿನ ಗುಡ್ಡದ ರಂಗವ್ವನಹಳ್ಳಿಯಲ್ಲಿ ಜನರು ಸಮಾಜಿಕ ಅಂತರ ಕಾಯ್ದುಕೊಳ್ಳದೆ ನ್ಯಾಯಬೆಲೆ ಅಂಗಡಿ ಮುಂದೆ ರೇಷನ್ ಖರೀದಿಸಲು ಮುಗಿಬಿದ್ದಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಈಗಾಗಲೇ ಬಾಕ್ಸ್​​ಗಳನ್ನು ಹಾಕಲಾಗಿದ್ದರೂ ಕೂಡ ಅದರಲ್ಲಿ ನಿಲ್ಲದೆ ಖಾಲಿ ಚೀಲಗಳನ್ನು ಇರಿಸುವ ಮೂಲಕ ಕ್ಯೂ ನಿಂತಿಕೊಳ್ಳುತ್ತಿರುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಈಗಾಗಲೇ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಏರುತ್ತಲೇ ಇದ್ದರೂ ಕೂಡ ಜನ ಮಾತ್ರ ಬುದ್ಧಿ ಕಲಿಯದೆ ಇರುವುದು ಆತಂಕಕ್ಕೀಡು ಮಾಡಿದೆ.

ABOUT THE AUTHOR

...view details