ಚಿತ್ರದುರ್ಗ:ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಳೆಗಾರರು ಲಾರಿ ಮಾಲೀಕರಿಗೆ ಹೆಚ್ಚಿನ ಹಣ ಕೊಟ್ಟು ಕೋಲ್ಕತ್ತಾಗೆ ಈರುಳ್ಳಿ ರವಾಸಿಸುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ರೈಲಿನ ಮೂಲಕ 20 ಟನ್ಗೂ ಅಧಿಕ ಈರುಳ್ಳಿ ಸಾಗಿಸಿದ್ದಾರೆ.
ಮೊದಲೆಲ್ಲ ದುಬಾರಿ ಬಾಡಿಗೆ ತೆತ್ತು ಕೋಲ್ಕತ್ತಾಗೆ ಈರುಳ್ಳಿ ಚೀಲಗಳನ್ನು ಬೆಳೆಗಾರರು ಸಾಗಿಸುತ್ತಿದ್ದರು. ಆದರೆ, ಮೊದಲ ಬಾರಿಗೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು 1 ಕೆಜಿ ಈರುಳ್ಳಿಗೆ ಒಂದು ರೂಪಾಯಿ ಅರವತ್ತು ಪೈಸೆ ಕೊಟ್ಟು ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮದ ನಿಲ್ದಾಣದಿಂದ ಕೋಲ್ಕತ್ತಾ ಮಾರುಕಟ್ಟೆಗೆ ಕಡಿಮೆ ವೆಚ್ಚದಲ್ಲಿ ಸುಮಾರು 20 ಬೋಗಿಗಳಲ್ಲಿ ಈರುಳ್ಳಿ ಸಾಗಣೆ ಮಾಡಿದ್ದಾರೆ.