ಚಿತ್ರದುರ್ಗ :ಮೊದಲ ಹಂತದಲ್ಲಿ 100 ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಯಲಿದೆ. 1,753 ಸ್ಥಾನಗಳಿಗೆ 2,261 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೆರಿ ತಿಳಿಸಿದ್ದಾರೆ.
ಮೊದಲ ಹಂತದ ಚುನಾವಣೆ ನಡೆಸಲು ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು ಆಯಾ ತಾಲೂಕುಗಳ ಅನ್ವಯವಾಗಿ ಚುನಾವಣಾ ಅಧಿಕಾರಿಗಳನ್ನು ಕೂಡ ನೇಮಕ ಮಾಡಲಾಗಿದೆ. ನಾಮಪತ್ರ ಸಲ್ಲಿಸಲು ಡಿ. 7 ರಿಂದ 10ರವರೆಗೆ ಅವಕಾಶ ನೀಡಲಾಗಿತ್ತು.
ಈ ಪೈಕಿ ಚಿತ್ರದುರ್ಗ ತಾಲೂಕಿನಲ್ಲಿ- 971, ಹೊಸದುರ್ಗ- 689 ಹಾಗೂ ಹೊಳಲ್ಕೆರೆ- 601 ಸೇರಿದಂತೆ ಒಟ್ಟು 2,261 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:ದಾವಣಗೆರೆಯಲ್ಲಿ 4,457 ನಾಮಪತ್ರಗಳು ಸಲ್ಲಿಕೆ
ಪರಿಶಿಷ್ಟ ಜಾತಿಯಲ್ಲಿ 652, ಪರಿಶಿಷ್ಟ ಪಂಗಡ 313, ಹಿಂದುಳಿದ ಅ ವರ್ಗದಲ್ಲಿ 197, ಹಿಂದುಳಿದ ಬಿ ವರ್ಗದಲ್ಲಿ 51 ಹಾಗೂ ಸಾಮಾನ್ಯ ವರ್ಗದಲ್ಲಿ 1,048 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಡಿಸಿ ಕವಿತಾ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.