ಚಿತ್ರದುರ್ಗ:ನಾನು ಇರುವುದು ನಿಮಗಾಗಿ ಎಂಬ ಅಣ್ಣವರ ಹಾಡನ್ನು ಸರಿಗಮಪ ವೇದಿಕೆಯಲ್ಲಿ ಹಾಡಿ ಕರ್ನಾಟಕದ ಮನೆಮಾತಾಗಿರುವ ಗೋರ್ವರ್ಧನ ಅಜ್ಜ ಮೂಲತಃ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೆ.ಸಿ.ರೊಪ್ಪ ಗ್ರಾಮದವರು.
ಸರಿಗಮಪ ಸೀಸನ್-17 ರಲ್ಲಿ ಮಿಂಚುತ್ತಿರುವ ಕೋಟೆನಾಡಿನ ಗೋವರ್ಧನ್ ಅಜ್ಜ! - ಗೋರ್ವರ್ಧನ್ ಅಜ್ಜ ಇದೀಗ ಕರ್ನಾಟಕದಲ್ಲೇ ಖ್ಯಾತಿ
ಸರಿಗಮಪ ವೇದಿಕೆಯಲ್ಲಿ ಹಾಡಿ ಕರ್ನಾಟಕದ ಮನೆಮಾತಾಗಿರುವ ಗೋರ್ವರ್ಧನ ಅಜ್ಜ ಮೂಲತಃ ಕೋಟೆನಾಡು ಚಿತ್ರದುರ್ಗ ಜಿಲ್ಲೆಯವರು..
![ಸರಿಗಮಪ ಸೀಸನ್-17 ರಲ್ಲಿ ಮಿಂಚುತ್ತಿರುವ ಕೋಟೆನಾಡಿನ ಗೋವರ್ಧನ್ ಅಜ್ಜ! KN_CTD_06_04_BACKGROUND_AV_7204336](https://etvbharatimages.akamaized.net/etvbharat/prod-images/768-512-5960369-thumbnail-3x2-vid---copy.jpg)
ಗ್ರಾಮದ ಕೆಲ ಜನರಿಗೆ ಸವಾಲ್ ಹಾಕಿ ಸರಿಗಮಪ ವೇದಿಕೆ ಹತ್ತಿದ್ದ ಗೋರ್ವರ್ಧನ್ ಅಜ್ಜ ಇದೀಗ ಕರ್ನಾಟಕದಲ್ಲೇ ಖ್ಯಾತಿ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದುರ್ಗದಲ್ಲಿ ನಡೆದಿದ್ದ ಸರಿಗಮಪ ಸೀಸನ್ 17 ಆಡಿಷನ್ನಲ್ಲಿ ಆಯ್ಕೆಯಾದ ಗೋರ್ವಧನ್ ಅವರೊಬ್ಬರು ರಂಗಕಲಾವಿದರು. ಚಿಕ್ಕ ವಯಸ್ಸಿನಿಂದ ಇವರು ಸಾಮಾಜಿಕ, ಪೌರಾಣಿಕ ನಾಟಕಗಳನ್ನು ಅಭಿನಯಿಸುತ್ತಾ ಜನ್ರ ನೆಚ್ಚಿನ ರಂಗಕರ್ಮಿಯಾಗಿ ಹೊರಹೊಮ್ಮಿದ್ದರು.
ಈ ರಂಗಭೂಮಿಯಲ್ಲಿ ಅನುಭವ ಆಗ್ತಾ ಆಗ್ತಾ ನಾಟಕದ ಮಾಸ್ಟರ್ ಕೂಡ ಆಗಿದ್ರು. ಅಲ್ದೇ ಬಿಡುವಿನ ವೇಳೆ ಶಾಲಾ ಮಕ್ಕಳಿಗೆ ಪಾಠ ಮಾಡ್ತಿದ್ದ ಗೋವರ್ಧನ ತಾತಾ, ಕರಡಿಮಜಲು, ಚಮಳ ಬಾರಿಸುವುದನ್ನು ಕಲಿಸುವ ಮೂಲಕ ಯುವಕರ ಕಣ್ಮಣಿ ಎನಿಸಿದ್ರು. ಹೀಗಾಗಿ ಗ್ರಾಮದ ಪ್ರತಿಯೊಬ್ಬರ ಸ್ನೇಹ, ಪ್ರೀತಿ ಗಳಿಸಿದ್ದ ಗೋವಿ ತಾತ ಇದೀಗ ಸರಿಗಮಪ ಕಾರ್ಯಕ್ರಮದ ಸ್ಪರ್ಧಿಯಾಗಿ ಆಯ್ಕೆಯಾಗಿರೋದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
TAGGED:
Seregampa Season-17