ಚಿತ್ರದುರ್ಗ:ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಅಭಿಯಾನಕ್ಕೆ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೈ ಜೋಡಿಸಿದ್ದು, ನಿನ್ನೆ ರಾತ್ರಿ ಸ್ಕೂಟಿ ಮೂಲಕ ಕಾರ್ಯಕರ್ತರೊಂದಿಗೆ ತೆರಳಿ ಸಾರ್ವಜನಿಕ ಗಮನ ಸೆಳೆದಿದ್ದಾರೆ.
ಶ್ರೀರಾಮ ಮಂದಿರ ನಿರ್ಮಾಣ ಅಭಿಯಾನಕ್ಕೆ ನಿಧಿ ಸಮರ್ಪಣೆಗೆ ಶಾಸಕಿ ಪೂರ್ಣಿಮಾ ನಿನ್ನೆ ಕಾರ್ಯಕರ್ತರ ಪಡೆಯೊಂದಿಗೆ ಹಿರಿಯೂರು ನಗರದ ವಿವಿಧ ಬಡಾವಣೆಗಳಲ್ಲಿ ದ್ವಿಚಕ್ರ ವಾಹನ ಮೂಲಕ ತೆರಳಿ ದೇಣಿಗೆ ಸಂಗ್ರಹಿಸಿದ್ದಾರೆ. ನಗರ ಎಂಟಕ್ಕೂ ಅಧಿಕ ಬಡಾವಣೆಗಳಿಗೆ ಶಾಸಕಿ ಸ್ಕೂಟಿ ಡ್ರೈವ್ ಮಾಡಿಕೊಂಡು ಜನರ ಮನೆ ಬಾಗಿಲಿಗೆ ಹೋಗಿ ನಿಧಿ ಸಮರ್ಪಣಾ ಅಭಿಯಾನಕ್ಕಾಗಿ ದೇಣಿಗೆ ಸಂಗ್ರಹಿಸಿದ್ದಾರೆ.