ಕರ್ನಾಟಕ

karnataka

ಕಾಲೇಜು ವಿದ್ಯಾರ್ಥಿ ಕಿಡ್ನಾಪ್​.. ಕೇಸ್​ ದಾಖಲಾದ ಮೂರು ತಾಸಲ್ಲೇ ಆರೋಪಿಗಳ ಬಂಧನ

ವಿದ್ಯಾರ್ಥಿ ಅಪಹರಣ ಪ್ರಕರಣ- ಪೊಲೀಸರ ಮಿಂಚಿನ ಕಾರ್ಯಾಚರಣೆ - ಕೇಸ್​ ದಾಖಲಾದ 3 ತಾಸಿನಲ್ಲೇ ಆರೋಪಿಗಳ ಬಂಧನ

By

Published : Jul 19, 2022, 3:06 PM IST

Published : Jul 19, 2022, 3:06 PM IST

ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರೇವಾ ಕಾಲೇಜು ವಿದ್ಯಾರ್ಥಿ ಅಪಹರಣ
ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರೇವಾ ಕಾಲೇಜು ವಿದ್ಯಾರ್ಥಿ ಅಪಹರಣ

ಚಿತ್ರದುರ್ಗ: ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರೇವಾ ಕಾಲೇಜು ವಿದ್ಯಾರ್ಥಿಯೊಬ್ಬರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು, ಪ್ರಕರಣ ದಾಖಲಾದ ಮೂರು ಗಂಟೆಗಳಲ್ಲೇ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಕಲಬುರುಗಿಯ ರಮೇಶ್ ರಾಥೋಡ್ (43), ರಿಜ್ವಾನ್ ಪಟೇಲ್ (23), ಇಂದ್ರಜಿತ್ ಪವಾರ್ (23) ಹಾಗೂ ಹರೀಶ್ ಕುಮಾರ್ (24) ಬಂಧಿತ ಆರೋಪಿಗಳು. ಇವರಿಂದ ಎರಡು ಕಾರುಗಳನ್ನು ಜಪ್ತಿ‌ ಮಾಡಲಾಗಿದೆ.

ವಿದ್ಯಾರ್ಥಿ ಅಪಹರಣ ಪ್ರಕರಣ ದಾಖಲಾದ 3 ಗಂಟೆಯಲ್ಲೇ ಚಿತ್ರದುರ್ಗ ಪೊಲೀಸರ ಸಹಕಾರದಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ‌ ಅನೂಪ್ ಶೆಟ್ಟಿ ತಿಳಿಸಿದ್ದಾರೆ. ವಿದ್ಯಾರ್ಥಿ ತಂದೆಯ ಜೊತೆಗೆ ಆರೋಪಿಗಳು ಹಣದ ವ್ಯವಹಾರ ಹೊಂದಿದ್ದರು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ವೈಷಮ್ಯ ಉಂಟಾಗಿತ್ತು. ಅಕ್ರಮವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಆರೋಪಿಗಳು, ವಿದ್ಯಾರ್ಥಿ ಅಪಹರಣ ಮಾಡಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಪ್ರೀತಿಸಿ ಮದುವೆ, ಬಳಿಕ ಹಿಂಸೆ.. ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿ ಸಿಗರೇಟ್​ನಿಂದ ಸುಟ್ಟ ಪತಿ!

For All Latest Updates

TAGGED:

ABOUT THE AUTHOR

...view details