ಕರ್ನಾಟಕ

karnataka

ETV Bharat / state

ಶಿರಾದಲ್ಲಿ ಬಿಜೆಪಿ ಪರ ಸುನಾಮಿ ಅಂದವರು ಹುಚ್ಚಾಸ್ಪತ್ರೆಯಿಂದ ಬಂದವರು: ಕೆ.ಎನ್​.ರಾಜಣ್ಣ - Chitradurga Yadavananda Math

ಸುನಾಮಿ ಎದ್ದಿದ್ದರೆ ವಿಜಯೇಂದ್ರ ಅವರು ಶಿರಾ ಪಟ್ಟಣದ ಕರೆಕಲ್ ಹಂಚಿನ‌ ಮನೆಯಲ್ಲಿ ಏಕೆ ವಾಸವಿರಬೇಕು. ಶಿರಾದಲ್ಲಿ ಬಿಜೆಪಿ ಪರ‌ ಯಾವುದೇ ಸುನಾಮಿಯಿಲ್ಲ..

Former MLA KN Rajanna reaction about vijayendra statement
ಶಿರಾದಲ್ಲಿ ಬಿಜೆಪಿ ಪರ ಸುನಾಮಿ ಎದ್ದಿದೆ ಅಂದವರು ಹುಚ್ಚಾಸ್ಪತ್ರೆಯಿಂದ ಬಂದವರು: ಕೆ.ಎನ್​.ರಾಜಣ್ಣ

By

Published : Oct 24, 2020, 4:59 PM IST

ಚಿತ್ರದುರ್ಗ: ಶಿರಾ ಮತ ಕ್ಷೇತ್ರದಲ್ಲಿ ಬಿಜೆಪಿ ಪರ ಯಾವುದೇ ಸುನಾಮಿ ಎದ್ದಿಲ್ಲ. ಹೀಗೆ ಹೇಳಿದವರು ಹುಚ್ಚಾಸ್ಪತ್ರೆಯಿಂದ ಬಂದವರು ಎಂದು ಬಿ.ವೈ.ವಿಜಯೇಂದ್ರಗೆ ಮಾಜಿ ಶಾಸಕ ಕೆ.ಎನ್​.ರಾಜಣ್ಣ ಟಾಂಗ್‌ ನೀಡಿದ್ದಾರೆ.

ಶಿರಾದಲ್ಲಿ ಬಿಜೆಪಿ ಪರ ಸುನಾಮಿ ಎದ್ದಿದೆ ಅಂದವರು ಹುಚ್ಚಾಸ್ಪತ್ರೆಯಿಂದ ಬಂದವರು: ಕೆ.ಎನ್​.ರಾಜಣ್ಣ

ಇಂದು ಮಾಜಿ ಶಾಸಕ ಕೆ ಎನ್​ ರಾಜಣ್ಣ ಚಿತ್ರದುರ್ಗದ ಯಾದವನಂದ ಮಠಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ’’ಶಿರಾ ಮತ‌ಕ್ಷೇತ್ರದಲ್ಲಿ ಬಿಜೆಪಿ ಪರ ಸುನಾಮಿ ಎದ್ದಿದೆ. ಅಲ್ಲಿನ ಜನರ ಒಲುವು ಬಿಜೆಪಿ ಪರ ಇದೆ ಎಂಬ ಬಿ.ವೈ.ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಹುಚ್ಚಾಸ್ಪತ್ರೆಯಿಂದ ಬಂದವರು ಈ ರೀತಿ ಮಾತನಾಡುತ್ತಾರೆ.

ಸುನಾಮಿ ಎದ್ದಿದ್ದರೆ ವಿಜಯೇಂದ್ರ ಅವರು ಶಿರಾ ಪಟ್ಟಣದ ಕರೆಕಲ್ ಹಂಚಿನ‌ ಮನೆಯಲ್ಲಿ ಏಕೆ ವಾಸವಿರಬೇಕು. ಶಿರಾದಲ್ಲಿ ಬಿಜೆಪಿ ಪರ‌ ಯಾವುದೇ ಸುನಾಮಿಯಿಲ್ಲ ಎಂದರು. ಈ ಉಪ‌ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಗೆಲುವು ಸಾಧಿಸುತ್ತಾರೆ.

ಕಾಂಗ್ರೆಸ್ ಪಕ್ಷ ಅಭಿವೃದ್ಧಿಯ ಕೆಲಸಗಳನ್ನು ಮಾಡಿದೆ. ಆದರೆ, ಬಿಜೆಪಿ ಸರ್ಕಾರ ಬಂದು ವರ್ಷಗಳೇ ಉರುಳಿವೆ. ಒಂದಾದರೂ ಜನಪರ ಕಾರ್ಯಕ್ರಮಗಳನ್ನು ಮಾಡಿದ್ದಾರಾ ಎಂದು ಎದೆ ಮುಟ್ಟಿಕೊಂಡು ಹೇಳಲಿ‌ ಎಂದು ಇದೇ ವೇಳೆ ಸವಾಲು ಹಾಕಿದರು.

ABOUT THE AUTHOR

...view details