ಕರ್ನಾಟಕ

karnataka

ETV Bharat / state

ಮಾಜಿ ಸಚಿವ ಹೆಚ್. ಆಂಜನೇಯರಿಂದ 'ಕೃಷಿ'ಕಾರಣ..  ಪತ್ನಿ ಜತೆಗೆ ಸ್ವಂತ ಜಮೀನಿನಲ್ಲಿ ಬಿತ್ತನೆ!! - ಮಾಜಿ ಸಚಿವ ಹೆಚ್. ಆಂಜನೇಯ

ಕೊರೊನಾ ಹಾವಳಿ, ರಾಜಕೀಯ ಜಂಜಾಟದಿಂದ ದೂರ ಸರಿದಿರುವ ಮಾಜಿ ಸಚಿವ ಹೆಚ್‌.ಆಂಜನೇಯ ಅವರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ..

Chitradurga
ಕೃಷಿಯತ್ತಾ ಮುಖ‌ಮಾಡಿದ ಮಾಜಿ ಸಚಿವ ಹೆಚ್. ಆಂಜನೇಯ

By

Published : Jul 17, 2020, 7:28 PM IST

ಚಿತ್ರದುರ್ಗ :ಕೊರೊನಾ ಹಾವಳಿಯಿಂದಾಗಿ ರಾಜಕೀಯ ಜಂಜಾಟ ಬಿಟ್ಟು ಮಾಜಿ ಸಚಿವರೊಬ್ಬರು ಕೃಷಿಯತ್ತ ಮುಖ ಮಾಡಿದ್ದಾರೆ. ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಕೃಷಿ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಕೃಷಿಯತ್ತಾ ಮುಖ‌ಮಾಡಿದ ಮಾಜಿ ಸಚಿವ ಹೆಚ್. ಆಂಜನೇಯ..

ಚಿತ್ರದುರ್ಗದಲ್ಲಿ ಕೆಲ ದಿನಗಳಿಂದ ಅಲ್ಪಸ್ವಲ್ಪ ಮಳೆಯಾಗುತ್ತಿರುವುದರಿಂದ ಹೆಚ್.ಆಂಜನೇಯ ಸೀಬಾರ ಗ್ರಾಮದ ತಮ್ಮ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ರೈತನಾಗಿರುವ ಆಂಜನೇಯ ಅವರು ಮೆಕ್ಕೆಜೋಳ ಬೆಳೆ ಬೆಳೆಯಲು ಮುಂದಾಗಿರುವ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ABOUT THE AUTHOR

...view details