ಚಿತ್ರದುರ್ಗ: ಖಾಸಗಿ ಕಾರಿಗೆ ಹಸಿರು ಗೂಟ ಅಳವಡಿಸಿಕೊಂಡು ರೈತ ಸಂಘಟನೆಯ ಮುಖಂಡ ಓಡಾಟ ನಡೆಸುತ್ತಿರುವ ದೃಶ್ಯ ಸಾರ್ವಜನಿಕರ ಮೊಬೈಲ್ ಸೆರೆಯಾಗಿದೆ.
ಸರ್ಕಾರದ ನಿಯಮ ಮೀರಿ ಹಸಿರು ಗೂಟದ ಕಾರಿನಲ್ಲಿ ರೈತ ಮುಖಂಡನ ಸುತ್ತಾಟ - formar leader
ಸರ್ಕಾರದ ನಿಯಮಗಳನ್ನು ಮೀರಿ ಕಾರಿಗೆ ಹಸಿರು ಗೂಟವನ್ನು ಅಳವಡಿಸಿಕೊಂಡು ರೈತ ಮುಖಂಡನೊಬ್ಬ ಸಂಚರಿಸುತ್ತಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಹಸಿರು ಗೂಟದ ಕಾರಿನಲ್ಲಿ ರೈತ ಮುಖಂಡನ ಸುತ್ತಾಟ
ರೈತ ಸಂಘಟನೆ ಮುಖಂಡನಿಗೆ ಸೇರಿದ KA 03 MJ 7744 ಸಂಖ್ಯೆಯ ಕಾರು ನಗರದ ಗಡಿ ಭಾಗದಲ್ಲಿ ಕಂಡು ಬಂದಿದೆ. ಹಸಿರು ಗೂಟದ ಕಾರಿನಲ್ಲಿ ರೈತ ಮುಖಂಡ ದರ್ಬಾರ್ ನಡೆಸುತ್ತಿದ್ದಾನೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ.
ಸೈರನ್ ಆಳವಡಿಕೆ ಮಾಡಿದ ಕಾರು ನಗರಕ್ಕೆ ಎಂಟ್ರಿ ಕೊಡದೆ ಗ್ರಾಮಾಂತರ ಭಾಗದಲ್ಲಿ ಸಂಚರಿಸಿದೆ ಎನ್ನಲಾಗುತ್ತಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಆಕ್ರಮವಾಗಿ ಹಸಿರು ಗೂಟ ಹಾಕಿಕೊಂಡು ಸಂಚರಿಸುತ್ತಿದ್ದರು ಸಹ ಅಧಿಕಾರಿಗಳು ಮಾತ್ರ ಕ್ರಮಕ್ಕೆ ಮುಂದಾಗಿಲ್ಲ ಎನ್ನಲಾಗಿದೆ.