ಚಿತ್ರದುರ್ಗ : ತಾಲೂಕಿನ ಮುದ್ದಪುರ ಗ್ರಾಮದ ಮನೆಯೊಂದರಲ್ಲಿ ಅವಿತು ಕುಳಿತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿ ಸಂದೀಪ್ ನಾಯಕ್ ನೇತೃತ್ವದ ತಂಡ ಸೆರೆ ಹಿಡಿದಿದ್ದಾರೆ.
ಮನೆಯೊಳಗೆ ಅವಿತಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು - ಚಿತ್ರದುರ್ಗದಲ್ಲಿ ಚಿರತೆ ಸೆರೆ
ಮನೆಯೊಳಗೆ ಅವಿತು ಕುಳಿತು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ.
ಚಿರತೆಯನ್ನು ಸೆರೆ ಹಿಡಿಯುತ್ತಿರುವ ದೃಶ್ಯ
ತಾಲೂಕಿನ ತೂರುವನೂರು ಗ್ರಾಮದ ಸುತ್ತಮುತ್ತ ಕಳೆದ ಹಲವು ದಿನಗಳಿಂದ ಆಗಾಗ ಚಿರತೆ ಕಾಣಿಸಿಕೊಂಡು ಜನರ ಆತಂಕಕ್ಕೆ ಕಾರಣವಾಗಿತ್ತು. ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆ ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಬೋನ್ ಇಟ್ಟಿದ್ದರು.
ಈ ನಡುವೆ ಮುದ್ದಪುರ ಗ್ರಾಮದ ಚಿಂದಾನಂದ ಎಂಬವರ ಮನೆಯೊಳಗೆ ಚಿರತೆ ಒಂದು ಸೇರಿಕೊಂಡಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.