ಚಿತ್ರದುರ್ಗ: ಹಾರೋಗೊಂಡನಹಳ್ಳಿಗೆ ಲಗ್ಗೆಯಿಟ್ಟು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ತಡ ರಾತ್ರಿ ಸೆರೆ ಹಿಡಿದ್ದಾರೆ.
ಹೊಸದುರ್ಗ ತಾಲೂಕಿನ ಹಾರೋಗೊಂಡನಹಳ್ಳಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಚಿರತೆ ಕಾಣಿಸಿಕೊಂಡಿತ್ತು. ಅಲ್ಲದೇ ಗ್ರಾಮದ ಮಂಜುನಾಥ ಎಂಬುವರ ಕುರಿ ಕೊಟ್ಟಿಗೆ ಮೇಲೆ ದಾಳಿ ನಡೆಸಿ 7 ಕುರಿಗಳನ್ನು ಬಲಿ ಪಡೆದಿತ್ತು. ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡ ಪರಿಣಾಮ ಮಕ್ಕಳು, ಮಹಿಳೆಯರು ಸಂಜೆಯಾದ್ರೆ ಮನೆಯಿಂದ ಹೊರ ಬರಲು ಹಿಂದೇಟು ಹಾಕುವ ವಾತಾವರಣ ನಿರ್ಮಾಣವಾಗಿತ್ತು.