ಕರ್ನಾಟಕ

karnataka

ETV Bharat / state

ಚಳ್ಳಕೆರೆ ವಿದ್ಯಾರ್ಥಿಗಳಿಂದ ಬಾಯಿ ಚಪ್ಪರಿಸುವಂತಹ 'ಆಹಾರ ಮೇಳ' - ಚಳ್ಳಕೆರೆ ವಾಸವಿ ಕಾಲೇಜ್ ಆವರಣದಲ್ಲಿ ಆಹಾರ ಮೇಳ

ಮಕ್ಕಳು ಅಷ್ಟೇ ಯಾವ ಬಾಣಿಸಿಗರಿಗೂ ಕಮ್ಮಿ ಇಲ್ಲ ಎಂಬಂತೆ ಖಾದ್ಯಗಳನ್ನು ತಯಾರಿಸುವ ಮೂಲಕ ಸಹಪಾಠಿಗಳು, ಶಿಕ್ಷಕರಿಂದ ಶಹಬಾಶ್ ಗಿರಿ ಪಡೆದರು. ದಿನವೂ ಅದೇ ಬುಕ್, ಅದೇ ಪಾಠ, ಹೋಮ್ ವರ್ಕ್ ಎನ್ನುತ್ತಿದ್ದ ಮಕ್ಕಳಿಗೆ ಆಹಾರ ಮೇಳ ಇದೊಂದು ರೀತಿ ಹಬ್ಬದ ವಾತಾವರಣ ಸೃಷ್ಟಿಸಿತ್ತು..

ಚಳ್ಳಕೆರೆ ವಾಸವಿ ಕಾಲೇಜು ವಿದ್ಯಾರ್ಥಿಗಳಿಂದ ಆಹಾರ ಮೇಳ
ಚಳ್ಳಕೆರೆ ವಾಸವಿ ಕಾಲೇಜು ವಿದ್ಯಾರ್ಥಿಗಳಿಂದ ಆಹಾರ ಮೇಳ

By

Published : Jan 4, 2022, 4:05 PM IST

ಚಿತ್ರದುರ್ಗ :ಚಳ್ಳಕೆರೆ ನಗರದ ವಾಸವಿ ಕಾಲೇಜ್ ಆವರಣ ಇವತ್ತು ತರಹೇವಾರಿ ಆಹಾರಗಳಿಂದಾಗಿ ಘಮಘಮಿಸುತ್ತಿತ್ತು.

ಚಳ್ಳಕೆರೆ ವಾಸವಿ ಕಾಲೇಜು ವಿದ್ಯಾರ್ಥಿಗಳಿಂದ ಆಹಾರ ಮೇಳ..

ಚಳ್ಳಕೆರೆ ನಗರದಲ್ಲಿರುವ ವಾಸವಿ ಕಾಲೇಜು ವಿದ್ಯಾರ್ಥಿಗಳು ಸ್ವತಃ ತಾವೇ ತಯಾರು ಮಾಡಿದ ಪಾನಿ ಪೂರಿ, ಫಿಜಾ ಬರ್ಗರ್, ಗೀ ರೈಸ್, ಪಕೋಡಾ, ಪಾಪ್ ಕಾರ್ನ್, ಬಜ್ಜಿ ಬೊಂಡಾ, ಕಾಫಿ, ಟೀ ಅಬ್ಬಬ್ಬಾ.. ಏನು ಬೇಕು, ಬೇಡಾ ಎಲ್ಲವನ್ನೂ ಒಂದೇ ಸೂರಿನಡಿ ಸಿಗುವ ರೀತಿ ತಯಾರಿಸಿದ್ದರು.

ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ವಹಿವಾಟು ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಮಾಡಿದ್ದ ಫುಡ್ ಫೆಸ್ಟ್​​ನಲ್ಲಿ ಈ ದೃಶ್ಯ ಕಂಡಿ ಬಂದಿತು.

ಮಕ್ಕಳು ಅಷ್ಟೇ ಯಾವ ಬಾಣಿಸಿಗರಿಗೂ ಕಮ್ಮಿ ಇಲ್ಲ ಎಂಬಂತೆ ಖಾದ್ಯಗಳನ್ನು ತಯಾರಿಸುವ ಮೂಲಕ ಸಹಪಾಠಿಗಳು, ಶಿಕ್ಷಕರಿಂದ ಶಹಬಾಶ್ ಗಿರಿ ಪಡೆದರು. ದಿನವೂ ಅದೇ ಬುಕ್, ಅದೇ ಪಾಠ, ಹೋಮ್ ವರ್ಕ್ ಎನ್ನುತ್ತಿದ್ದ ಮಕ್ಕಳಿಗೆ ಆಹಾರ ಮೇಳ ಇದೊಂದು ರೀತಿ ಹಬ್ಬದ ವಾತಾವರಣ ಸೃಷ್ಟಿಸಿತ್ತು.

ಅಡಿಗೆ ಮಾಡಿವುದು ಹೇಗೆ, ಅದನ್ನು ವ್ಯಾಪಾರ ಮಾಡುವುದು, ಲಾಭ ನಷ್ಟ ಹೇಗೆ ಎಂಬುದನ್ನು ನಮಗೆ ತಿಳಿಯುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬ್ಯುಜಿನೆಸ್ ಸ್ಟಡಿ, ಮಾರ್ಕೆಟಿಂಗ್ ಮಾಡುವವರಿಗೆ ಇದು ಅನುಕೂಲ ಆಗುತ್ತದೆ ಅಂತಾರೆ ವಿದ್ಯಾರ್ಥಿಗಳು.

For All Latest Updates

ABOUT THE AUTHOR

...view details