ಚಿತ್ರದುರ್ಗ:ಡಿಆರ್ಡಿಒಗೆ ಸೇರಿದ ಮಾನವ ರಹಿತ ವಿಮಾನ ಪತನವಾಗಿರುವ ಘಟನೆ ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಗ್ರಾಮದ ಬಳಿ ನಡೆದಿದೆ.
ಚಿತ್ರದುರ್ಗದಲ್ಲಿ ಡಿಆರ್ಡಿಒ ಮಾನವರಹಿತ ವಿಮಾನ ಪತನ: ಫ್ಲೈಟ್ ಬೀಳುವ ವಿಡಿಯೋ ವೈರಲ್ - ಚಿತ್ರದುರ್ಗದಲ್ಲಿ ವಿಮಾನ ಪತನ
ಡಿಆರ್ಡಿಒಗೆ ಸೇರಿದ ಮಾನವ ರಹಿತ ವಿಮಾನ ಪತನವಾಗಿರುವ ಘಟನೆ ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಗ್ರಾಮದ ಬಳಿ ನಡೆದಿದೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಡಿಆರ್ಡಿಒ ಸಂಸ್ಥೆಯ ವಿಮಾನ ಇದಾಗಿದ್ದು, ಪರೀಕ್ಷಾರ್ಥವಾಗಿ ಗಗನಕ್ಕೆ ಹಾರಿಸಿದ್ದಾಗ ಅವಘಡ ನಡೆದಿದೆ ಎನ್ನಲಾಗ್ತಿದೆ.
![ಚಿತ್ರದುರ್ಗದಲ್ಲಿ ಡಿಆರ್ಡಿಒ ಮಾನವರಹಿತ ವಿಮಾನ ಪತನ: ಫ್ಲೈಟ್ ಬೀಳುವ ವಿಡಿಯೋ ವೈರಲ್](https://etvbharatimages.akamaized.net/etvbharat/prod-images/768-512-4464122-thumbnail-3x2-giri.jpg)
ಡಿ.ಆರ್.ಡಿ.ಒ ವಿಮಾನ ಪತನ
ಚಿತ್ರದುರ್ಗದಲ್ಲಿ ಡಿಆರ್ಡಿಒ ಮಾನವ ರಹಿತ ವಿಮಾನ ಪತನ
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಡಿಆರ್ಡಿಒ ಸಂಸ್ಥೆಯ ವಿಮಾನ ಇದಾಗಿದ್ದು, ಪರೀಕ್ಷಾರ್ಥವಾಗಿ ಗಗನಕ್ಕೆ ಹಾರಿಸಿದ್ದಾಗ ಅವಘಡ ನಡೆದಿದೆ. ವಿಮಾನ ಪತನದಿಂದಾಗಿ ಜೋಡಿಚಿಕ್ಕೇನಹಳ್ಳಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಇನ್ನು ವಿಮಾನಕ್ಕೆ ಬೆಂಕಿ ಹೊತ್ತಿಕೊಳ್ಳುತ್ತೆ ಎಂಬ ಭಯದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಧೈರ್ಯಮಾಡಿ ವಿಮಾನದ ಬಳಿ ಹೋಗಿ ನೋಡಿದಾಗ ವಿಮಾನದಲ್ಲಿ ಕೇವಲ ವೈರ್ಗಳನ್ನು ಕಂಡು ಗ್ರಾಮಸ್ಥರು ಆಶ್ಚರ್ಯಚಕಿತರಾದರು. ಅಲ್ಲದೇ ಇದು ಮಾನವ ರಹಿತ ವಿಮಾನ ಎಂಬುದು ಗೊತ್ತಾಗಿದೆ. ಇದೇ ವೇಳೆ ಯುವಕರು ವಿಮಾನದ ಮೇಲೆ ಹತ್ತಿ ಅಚ್ಚರಿಯಿಂದ ನೋಡುತ್ತಿದ್ದ ದೃಶ್ಯ ಕಂಡುಬಂತು.
Last Updated : Sep 17, 2019, 7:00 PM IST