ಕರ್ನಾಟಕ

karnataka

ETV Bharat / state

ಬರೋಬ್ಬರಿ ನಾಲ್ಕು ಎಕರೆ ಜಮೀನಿನಲ್ಲಿ ಗಾಂಜಾ ಬೆಳೆ: ವಡೇರಹಳ್ಳಿಯಲ್ಲಿ ಐವರು ಅಂದರ್​  ​ - ಬರೋಬ್ಬರಿ ನಾಲ್ಕು ಎಕರೆ ಜಮೀನಿನಲ್ಲಿ ಗಾಂಜಾ ಬೆಳೆ

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ವಡೇರಹಳ್ಳಿಯಲ್ಲಿ ಗಾಂಜಾ ಬೆಳೆದಿದ್ದ ಐವರು ಆರೋಪಿಗಳನ್ನು ರಾಂಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ganja

By

Published : Sep 4, 2020, 12:10 PM IST

ಚಿತ್ರದುರ್ಗ: ವಡೇರಹಳ್ಳಿ ಬಳಿ 4 ಎಕರೆಯಲ್ಲಿ ಬೆಳೆದಿದ್ದ ಗಾಂಜಾ ಜಪ್ತಿ ಮಾಡಲಾಗಿದೆ. ರಾಂಪುರ ಠಾಣೆ ಪಿಎಸ್ಐ ಗುಡ್ಡಪ್ಪ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದು, ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ಜಪ್ತಿ ಮಾಡಿದ್ದಾರೆ.

ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ವಡೇರಹಳ್ಳಿಯಲ್ಲಿ ಗಾಂಜಾವನ್ನು ಬೆಳೆದಿದ್ದ ಐವರು ಆರೋಪಿಗಳನ್ನು ರಾಂಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ನಾಲ್ಕು ಎಕ್ಕರೆಯಲ್ಲಿ ಬೆಳೆದ ಗಾಂಜಾ

ಬಂಧಿತರನ್ನು ಬಳ್ಳಾರಿ ಜಿಲ್ಲೆಯ ಸಂಡೂರು ಮೂಲದ ರುದ್ರೇಶ್, ಕೂಡ್ಲಗಿ ಮೂಲದ ಸಮಂತ್, ಮೊಳಕಾಲ್ಮೂರು ತಾಲೂಕಿನ ರಾಂಪುರ ಮೂಲದ ಮಂಜುನಾಥ್, ಜಂಬುನಾಥ್, ಬಿ.ವೈ ಮಂಜುನಾಥ್ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳು

ಗಾಂಜಾ ವಶಕ್ಕೆ ಪಡೆದಿರುವ ಪೊಲೀಸರು ನಾಲ್ಕು ಎಕರೆ ಪ್ರದೇಶದಲ್ಲಿ ಗಾಂಜಾ ಬೆಳೆದಿದ್ದರ ಬಗ್ಗೆ ಹಾಗು ಬೆಳೆದ ಗಾಂಜಾವನ್ನು ಎಲ್ಲಿಗೆ ಸರಬರಾಜು ಮಾಡಲಾಗುತಯ್ತಿತ್ತು ಎಂಬುದರ‌ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ.

ABOUT THE AUTHOR

...view details