ಕರ್ನಾಟಕ

karnataka

ETV Bharat / state

ಕೆರೆಯಲ್ಲಿ ಸಾವಿರಾರು ಮೀನುಗಳು ಸಾವು....ಗ್ರಾಮಸ್ಥರಲ್ಲಿ ಆತಂಕ - ಗ್ರಾಮಸ್ಥರಲ್ಲಿ ಆತಂಕ

ಮಲ್ಲಾಪುರ ಗ್ರಾಮದ ಬಳಿಯ ಕೆರೆಯಲ್ಲಿ ಮೀನುಗಳು ಸಾವನಪ್ಪಿದ್ದು, ಜನರ ಆತಂಕಕ್ಕೀಡು ಮಾಡಿದೆ. ಸತತ ಎರಡು ದಿನದಿಂದ ಸಾವಿರಾರು ಮೀನುಗಳು ಸಾವನಪ್ಪಿದ್ದರಿಂದ ಮೀನುಗಳ ಸಾವಿಗೆ ನಿಖರ ಕಾರಣ‌ ತಿಳಿದು ಬಂದಲ್ಲಿ.

fish-die-in-the-lake
ಕೆರೆಯಲ್ಲಿ ಸಾವಿರಾರು ಮೀನುಗಳು ಸಾವು

By

Published : Apr 9, 2020, 12:28 PM IST

ಚಿತ್ರದುರ್ಗ:ಕೊರೊನಾ ವೈರಸ್ ಭೀತಿಯ ಮಧ್ಯದಲ್ಲಿ, ಈ ಗ್ರಾಮದಲ್ಲಿ ಎರಡು ದಿನದಿಂದ‌ ಸಾವಿರಾರು‌ ಮೀನುಗಳು ಕೆರೆಯಲ್ಲಿಯೆ ಸಾವನಪ್ಪಿರುವುದಕ್ಕೆ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.

ತಾಲೂಕಿನ ಮಲ್ಲಾಪುರ ಗ್ರಾಮದ ಬಳಿಯ ಕೆರೆಯಲ್ಲಿ ಮೀನುಗಳು ಸಾವನಪ್ಪಿದ್ದು, ಜನರ ಆತಂಕಕ್ಕೀಡು ಮಾಡಿದೆ. ಸತತ ಎರಡು ದಿನದಿಂದ ಸಾವಿರಾರು ಮೀನುಗಳು ಸಾವನಪ್ಪಿದ್ದರಿಂದ ಮೀನುಗಳ ಸಾವಿಗೆ ನಿಖರ ಕಾರಣ‌ ತಿಳಿದು ಬಂದಲ್ಲಿ. ಇದರಿಂದ ಮಲ್ಲಪುರ ಗ್ರಾಮಸ್ಥರಲ್ಲಿ ಆತಂಕಕ್ಕೀಡು ಮಾಡಿದೆ.

ಕೆರೆಯಲ್ಲಿ ಸಾವಿರಾರು ಮೀನುಗಳು ಸಾವು

ಇನ್ನೂ ಚಿತ್ರದುರ್ಗ ನಗರದ ತ್ಯಾಜ್ಯ ಮಲ್ಲಾಪುರ ಕೆರೆಗೆ ಸೇರುತ್ತಿದ್ದು, ತ್ಯಾಜ್ಯದಿಂದ ನೀರು ಕಲುಷಿತಗೊಂಡು ಮೀನು ಸಾವನಪ್ಪಿರುವ ಶಂಕೆ‌ ಕೂಡ ವ್ಯಕ್ತವಾಗಿದೆ. ಮೀನುಗಳ ಸಾವಿನಿಂದ ಇಡೀ ಕೆರೆ ದುರ್ನಾತ ಬೀರುತ್ತಿದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೆರೆಗೆ ಭೇಟಿ ನೀಡಿ ಶೀಘ್ರವೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಜನರ ಆಗ್ರಹಿಸಿದ್ದಾರೆ.

ABOUT THE AUTHOR

...view details