ಚಿತ್ರದುರ್ಗ: ಕೋಟೆನಾಡಿನಲ್ಲಿ ತಿದ್ದುಪಡಿ ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ಏಳನೇ ದಿನಕ್ಕೆ ಕಾಲಿಟ್ಟಿದೆ.
ಕೋಟೆನಾಡಲ್ಲಿ ಏಳನೇ ದಿನಕ್ಕೆ ಕಾಲಿಟ್ಟ ಎನ್ಆರ್ಸಿ ವಿರುದ್ಧದ ಹೋರಾಟ - Chitradurga Muslim Advocate Well Fair Trust
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೋಟೆನಾಡು ಚಿತ್ರದುರ್ಗದಲ್ಲಿ ನಡೆಯುತ್ತಿರುವ ಹೋರಾಟ ಒಂದು ವಾರ ಪೂರ್ಣಗೊಳಿಸಿದೆ.
ಕೋಟೆನಾಡಲ್ಲಿ ಏಳನೇ ದಿನಕ್ಕೆ ಕಾಲಿಟ್ಟ ಎನ್ಆರ್ಸಿ ವಿರುದ್ಧದ ಹೋರಾಟ
ಕಳೆದ ಏಳು ದಿನಗಳಿಂದ ಮುಸ್ಲಿಂ ಅಡ್ವೋಕೇಟ್ ವೆಲ್ಫೇರ್ ಟ್ರಸ್ಟ್ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್ಆರ್ ಸಿ ಹಿಂಪಡೆಯುವಂತೆ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದೆ, ನಗರದ ಒನಕೆ ಓಬವ್ವ ವೃತ್ತದಲ್ಲಿ ನಡೆಯುತ್ತಿರುವ ಮುಷ್ಕರದಲ್ಲಿಂದು ವಕೀಲರ ಪತ್ನಿಯರು, ಮಕ್ಕಳು ಸೆರಿ ಕುಟುಂಬದ ಸದಸ್ಯರು ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕೇಂದ್ರ ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದ್ದು, ಎನ್ಆರ್ಸಿ,ಎನ್ಪಿಆರ್, ಸಿಎಎ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು.
Last Updated : Feb 9, 2020, 10:58 PM IST