ಕರ್ನಾಟಕ

karnataka

ETV Bharat / state

ಪ್ರೀತಿಸಿ, ಮನೆಬಿಟ್ಟು ಹೋಗಿ ವಿವಾಹವಾದ ಮಗಳು: ಆತ್ಮಹತ್ಯೆಗೆ ಶರಣಾದ ನೊಂದ ತಂದೆ - ತಂದೆ ಆತ್,ಹತ್ಯೆ

ತನ್ನನ್ನು ಕಡೆಗಣಿಸಿ ಮಗಳು ಮನೆಬಿಟ್ಟು ಹೋಗಿ ಮದುವೆಯಾದಳು ಎಂದು ತೀವ್ರವಾಗಿ ಮನನೊಂದ ತಂದೆಯೊಬ್ಬ ಊರಹೊರಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

father-commit-suicide-after-his-daughter-got-love-marriage
ಮಗಳು ಪ್ರೀತಿಸಿ, ಮನೆಬಿಟ್ಟು ಹೋಗಿ ವಿವಾಹ

By

Published : Aug 24, 2021, 9:44 AM IST

ಚಿತ್ರದುರ್ಗ:ಮಗಳು ಪ್ರೀತಿಸಿ ಮನೆಬಿಟ್ಟು ಹೋಗಿ ಮದುವೆಯಾದಳು ಎಂಬ ಬೇಸರದಿಂದ ತಂದೆ ನೇಣು ಬಿಗಿದುಕೊಂಡು ಸಾವಿನ ಹಾದಿ ತುಳಿದ ಘಟನೆ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಮರಕ್ಕೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ತಂದೆ

ನಗರಂಗೆರೆ ಗ್ರಾಮದ ನಿವಾಸಿ ದ್ಯಾಮಣ್ಣ (45) ಮೃತ ವ್ಯಕ್ತಿ. ಮೃತ ದ್ಯಾಮಣ್ಣ ಆಟೋ ಚಾಲಕನಾಗಿದ್ದು, ಮಗಳು ಮನೆಬಿಟ್ಟು ಹೋಗಿದ್ದರಿಂದ ಅವಮಾನಗೊಂಡು ಸಾವಿಗೆ ಶರಣಾದರು ಎಂದು ತಿಳಿದುಬಂದಿದೆ.

ಇದಕ್ಕೂ ಮೊದಲು ಮನೆಯಲ್ಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಹೆಂಡತಿ, ಮಕ್ಕಳು ತಡೆದಿದ್ದಾರೆ. ಬಳಿಕ ಆಟೋ ಮೂಲಕ ಊರ ಹೊರವಲಯಕ್ಕೆ ತೆರಳಿರುವ ದ್ಯಾಮಣ್ಣ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಚಿಕನ್ ಫ್ರೈ ಸರಿಯಾಗಿ ಮಾಡಿಲ್ಲ ಎಂದು ಪತ್ನಿಗೆ ಮುಹೂರ್ತ ಇಟ್ಟ: 18 ದಿನಗಳ ನಂತರ ಅಸಲಿ ಕಹಾನಿಯೇ ಬೇರೆಯಾಗಿತ್ತು..!

ABOUT THE AUTHOR

...view details