ಚಿತ್ರದುರ್ಗ: ರೈತರೇ ನಿಮ್ಮ ಜಮೀನನ್ನು ಬೇರೊಬ್ಬರಿಗೆ ಲೀಸ್ ನೀಡುವ ಮುನ್ನ ಒಮ್ಮೆ ಯೋಚಿಸಿ ,ಇಲ್ಲವಾದಲ್ಲಿ ನಿಮ್ಮ ಜಮೀನನ್ನು ಪೊಲೀಸರು ಸೀಜ್ ಮಾಡುವ ಸಂಭವ ಹೆಚ್ಚಿರುತ್ತದೆ. ಉಳುಮೆ ಮಾಡಲು ಬಂದವರ ಪೈಕಿ ಕೆಲವರು ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ರೈತರು ಬೇಕಾಬಿಟ್ಟಿ ಜಮೀನು ಲೀಸ್ ನೀಡಿದರೆ ಪ್ರಕರಣ ದಾಖಲಾಗುವುದು ಖಂಡಿತ.
ಜಮೀನು ಲೀಸ್‌ಗೆ ಕೊಡುವ ರೈತರೇ ಎಚ್ಚರ: ಯಾಮಾರಿದ್ರೆ ಈ ಕಾರಣಕ್ಕೆ ಬೀಳುತ್ತೆ ಕೇಸ್!
ಮೊಳಕಾಲ್ಮೂರಿನಲ್ಲಿ ನಾಲ್ಕು ಎಕರೆ ಹಾಗು ಹೊಳಲ್ಕೆರೆ ಭಾಗಗಳಲ್ಲಿ ಐದು ಎಕರೆ ಜಮೀನನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಜೊತೆಗೆ ರೈತರ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದಾರೆ. ಇದಕ್ಕೆ ಕಾರಣವೇನು ಗೊತ್ತೇ?
ಜಮೀನು ಲೀಸ್‌ಗೆ ಕೊಡುವ ರೈತರೇ ಎಚ್ಚರ, ಸ್ವಲ್ಪ ಯಾಮಾರಿದ್ರು ಕೇಸ್ ದಾಖಲು...!
ಜಿಲ್ಲೆಯ ಹೊಳಲ್ಕೆರೆ, ಮೊಳಕಾಲ್ಮೂರು, ಚಳ್ಳಕೆರೆ ಭಾಗಗಳಲ್ಲಿ ಕಳೆದ ಮೂರು ತಿಂಗಳುಗಳಿಂದ ಗಾಂಜಾ ಘಾಟು ಹೆಚ್ಚಾಗಿದೆ. ಇದಕ್ಕೆ ಅಮಾಯಕ ರೈತರು ಬಲಿಯಾಗುತ್ತಿದ್ದಾರೆ. ಹೀಗೆ ಲೀಸ್‌ಗೆ ನೀಡಿದ್ದ ಜಮೀನು ಅನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ. ಸಾಕಷ್ಟು ರೈತರು ತಮ್ಮ ಜಮೀನುಗಳನ್ನು ಅಪರಿಚಿತ ವ್ಯಕ್ತಿಗಳಿಗೆ ಮಾರಾಟ ಮಾಡಿ ಅಥವಾ ಲೀಸ್‌ಗೆ ನೀಡಿ ಪಟ್ಟಣಗಳತ್ತ ಮುಖ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರು ಬೆಳೆಗಳ ಮಧ್ಯೆ ಎಕರೆ ಗಟ್ಟಲೆ ಗಾಂಜಾ ಬೆಳೆದು ರೈತರಿಗೆ ಕಂಟಕ ತಂದಿದ್ದಾರೆ.