ಚಿತ್ರದುರ್ಗ:ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ ರದ್ದು ಪಡಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ರೈತ ಹಾಗೂ ಕನ್ನಡಪರ ಸಂಘಟನೆಗಳಿಂದ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಮತ್ತೆ ಸತ್ಯಾಗ್ರಹ ಆರಂಭಿಸಿದ ರೈತ ಸಂಘ - farmers protest on gandhi jayanthi
ರೈತ ಸಂಘಟನೆಗಳು ಹಾಗು ಕನ್ನಡಪರ ಸಂಘಟನೆಗಳು ಚಿತ್ರದುರ್ಗದಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ರದ್ದು ಪಡಿಸುವಂತೆ ಆಗ್ರಹಿಸಿ ಪುನಃ ಸತ್ಯಾಗ್ರಹ ಹಮ್ಮಿಕೊಂಡಿದ್ದವು..
![ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಮತ್ತೆ ಸತ್ಯಾಗ್ರಹ ಆರಂಭಿಸಿದ ರೈತ ಸಂಘ chitradurga](https://etvbharatimages.akamaized.net/etvbharat/prod-images/768-512-9022715-967-9022715-1601637004897.jpg)
ಪ್ರತಿಭಟನೆ
ರೈತ ವಿರೋಧಿ ಕಾಯ್ದೆಗಳ ವಿರುದ್ಧ ಸತ್ಯಾಗ್ರಹ
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗಾಂಧಿ ಜಯಂತಿ ಪ್ರಯುಕ್ತ ಗಾಂಧೀಜಿ ಫೋಟೋ ಇರಿಸಿ ಜಯಂತಿ ಆಚರಿಸುವ ಮೂಲಕ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಯಿತು. ಸತ್ಯಾಗ್ರಹದಲ್ಲಿ ಸಾಕಷ್ಟು ರೈತರು ಭಾಗಿಯಾಗಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ರೈತರಿಗೆ ಬಂದ್ ವೇಳೆ ಸಾಥ್ ನೀಡಿದ್ದ ಕನ್ನಡ ಪರ ಸಂಘಟನೆಗಳು ಹಾಗು ವಿವಿಧ ದಲಿತ ಪರ ಸಂಘಟನೆಗಳು ಇದರಲ್ಲಿ ಭಾಗಿಯಾಗಿದ್ದವು. ತಕ್ಷಣ ರೈತ ವಿರೋಧಿ ಕಾಯ್ದೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದವು. ಇದೇ ಸಂದರ್ಭದಲ್ಲಿ ಸರ್ಕಾರದ ಕಾಯ್ದೆಯಿಂದಾಗಿ ಎಪಿಎಂಸಿ ಮುಚ್ಚುವ ಆತಂಕವನ್ನು ಚಿತ್ರದುರ್ಗದ ರೈತರು ವ್ಯಕ್ತಪಡಿಸಿದರು.