ಕರ್ನಾಟಕ

karnataka

ಸಂಕಷ್ಟಕ್ಕೀಡಾದ ಬರದ ನಾಡಿನ ರೈತರ ಕೈ ಹಿಡಿಯಲಿದೆಯಾ ಸರ್ಕಾರ?

ಲಾಕ್​ಡೌನ್ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ಸಂಕಷ್ಟಕ್ಕೀಡಾಗಿದ್ದಾರೆ.

By

Published : Apr 10, 2020, 4:28 PM IST

Published : Apr 10, 2020, 4:28 PM IST

Chitradurga
ಸಂಕಷ್ಟಕ್ಕೀಡಾದ ಬರದನಾಡಿನ ರೈತರ ಕೈ ಹಿಡಿಯಲಿದೆಯಾ ಸರ್ಕಾರ

ಚಿತ್ರದುರ್ಗ:ಕೊರೊನಾ ಸೋಂಕು ತಡೆಗೆ ಜಾರಿಯಲ್ಲಿರುವ ಭಾರತ ಲಾಕ್​ಡೌನ್ ಹಿನ್ನೆಲೆಯಲ್ಲಿ ಬರದನಾಡು ಚಿತ್ರದುರ್ಗದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಚಿಕ್ಕಮ್ಮನಹಳ್ಳಿ ಗ್ರಾಮದ ಜಮೀನಿನಲ್ಲಿ ಸಿಹಿ ಕುಂಬಳಕಾಯಿ ಕೊಳೆಯುತ್ತಿದ್ದು, ರೈತನ ನೋವು ಕೇಳುವವರಿಲ್ಲದಾಗಿದೆ.

ಸಂಕಷ್ಟಕ್ಕೀಡಾದ ಬರದನಾಡಿನ ರೈತರ ಕೈ ಹಿಡಿಯಲಿದೆಯಾ ಸರ್ಕಾರ?

ಚಳ್ಳಕೆರೆ ತಾಲ್ಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದ ರೈತ ತನ್ನ ಮೂರು ಎಕರೆ ಜಮೀನಿನಲ್ಲಿ ಸಿಹಿಗುಂಬಳ ಬೆಳೆದು ಮಾರುಕಟ್ಟೆಗೆ ಸಾಗಿಸಲಾಗದೇ ಕಂಗಾಲಾಗಿದ್ದಾನೆ. ರೈತ ವಿರೇಶ್ ಸರ್ಕಾರದ ಹೆಲ್ಪ್​ಲೈನ್​ಗೆ ಮಾಹಿತಿ ನೀಡಿ‌ ಐದು ದಿನ‌ ಕಳೆದರೂ ಅಧಿಕಾರಿಗಳು ಮಾತ್ರ ಸ್ಪಂದಿಸಿಲ್ಲ ಎಂದು ಅವರು ದೂರಿದ್ದಾರೆ.

ಸಿಹಿಗುಂಬಳ‌ ಖರೀದಿಸುವುದಾಗಿ ಹೇಳಿದ್ದ ಅಧಿಕಾರಿಗಳ ಭರವಸೆ ಹುಸಿಯಾಗಿದ್ದು, ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೊರೊನಾ ಲಾಕ್​ಡೌನ್​ನಿಂದಾಗಿ ಬೆಳೆ ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಸರ್ಕಾರ ತಕ್ಷಣ ನಷ್ಟ ಭರಿಸಿಕೊಡಬೇಕೆಂದು ಅವರು ಒತ್ತಾಯಿಸಿದರು.

ABOUT THE AUTHOR

...view details