ಚಿತ್ರದುರ್ಗ: ಈರುಳ್ಳಿ ರಫ್ತನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬಳಿಕ ಬೆಳೆಗಾರರು ಕಂಗಾಲಾಗಿದ್ದಾರೆ. ಈರುಳ್ಳಿಗೆ ಸರಿಯಾದ ಬೆಲೆ ಸಿಗದೆ, ಮಳೆಯಿಂದ ಸುಳಿ ರೋಗಕ್ಕೆ ತುತ್ತಾಗಿದ್ದ ಈರುಳ್ಳಿ ರಾಶಿಯನ್ನು ಜೆಸಿಬಿ ಸಹಾಯದಿಂದ ರೈತನೋರ್ವ ತಿಪ್ಪೆಗೆ ಹಾಕಿದ್ದಾನೆ.
ಈರುಳ್ಳಿ ರಫ್ತನ್ನು ನಿಲ್ಲಿಸಿದ ಕೇಂದ್ರ.. ಬೆಳೆಯನ್ನು ತಿಪ್ಪೆಗೆಸೆದ ಚಿತ್ರದುರ್ಗದ ರೈತ - prices of onions are low
ಮಳೆಯ ಹೊಡೆತಕ್ಕೆ ಸುಳಿ ರೋಗಕ್ಕೆ ತುತ್ತಾಗಿದ್ದು, ಒಂದೆಡೆಯಾದ್ರೇ, ಮತ್ತೊಂದೆಡೆ ಈರುಳ್ಳಿ ಬೆಲೆ ನೆಲಕಚ್ಚಿದ್ದರಿಂದ ಸರಿಯಾದ ಬೆಲೆ ಸಿಗದೆ ಇಡೀ ಈರುಳ್ಳಿ ರಾಶಿಯನ್ನು ತಿಪ್ಪೆಗೆ ಹಾಕಲಾಗಿದೆ..
ಈರುಳ್ಳಿ ರಫ್ತನ್ನು ನಿಲ್ಲಿಸಿದ ಕೇಂದ್ರ : ಬೆಳೆಯನ್ನು ತಿಪ್ಪೆಗೆಸೆದ ಚಿತ್ರದುರ್ಗದ ರೈತ
ಚಿತ್ರದುರ್ಗ ತಾಲೂಕಿನ ಕಸವನಹಟ್ಟಿ ಗ್ರಾಮದ ನಿವಾಸಿ ರೈತ ಶ್ರೀಧರ್ ರೆಡ್ಡಿ, ತನ್ನ ಎಂಟು ಎಕರೆ ಜಮೀನಿನಲ್ಲಿ ಸುಮಾರು ಆರು ಲಕ್ಷ ವ್ಯಯ ಮಾಡಿ ಈರುಳ್ಳಿ ಬೆಳೆದಿದ್ದರು. ಮಳೆಯ ಹೊಡೆತಕ್ಕೆ ಸುಳಿ ರೋಗಕ್ಕೆ ತುತ್ತಾಗಿದ್ದು, ಒಂದೆಡೆಯಾದ್ರೇ, ಮತ್ತೊಂದೆಡೆ ಈರುಳ್ಳಿ ಬೆಲೆ ನೆಲಕಚ್ಚಿದ್ದರಿಂದ ಸರಿಯಾದ ಬೆಲೆ ಸಿಗದೆ ಇಡೀ ಈರುಳ್ಳಿ ರಾಶಿಯನ್ನು ರೈತ ಶ್ರೀಧರ್ ರೆಡ್ಡಿ ತಿಪ್ಪೆಗೆ ಹಾಕಿರುವ ಘಟನೆ ನಡೆದಿದೆ.
ಇದರಿಂದ ರೈತ ಶ್ರೀಧರ್ ರೆಡ್ಡಿಗೆ ಒಟ್ಟು ಆರು ಲಕ್ಷಕ್ಕಿಂತ ಹೆಚ್ಚು ನಷ್ಟವಾಗಿದೆ. ರಾಜ್ಯ ಸರ್ಕಾರ ನೀಡುವ ಬೆಳೆ ಪರಿಹಾರಕ್ಕಾಗಿ ಕಾದು ಕೂತಿದ್ದಾರೆ.