ಚಿತ್ರದುರ್ಗ:ಕೊರೊನಾ ಸೋಂಕು ತಡೆಗೆ ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕಷ್ಟಪಟ್ಟು ಬೆಳೆದ ಈರುಳ್ಳಿ ಬೆಳೆ ತುಂಬಲು ಖಾಲಿ ಚೀಲವೂ ಸಿಗದೆ ಈರುಳ್ಳಿ ಚೀಲಕ್ಕಾಗಿ ರೈತರ ಪರದಾಡುವ ಸ್ಥಿತಿ ಎದುರಾಗಿದೆ.
ಬೆಳೆದ ಈರುಳ್ಳಿ ತುಂಬಲು ಚೀಲವಿಲ್ಲದೆ ಚಿತ್ರದುರ್ಗದಲ್ಲಿ ರೈತರ ಪರದಾಟ - corona effect
ಚಿತ್ರದುರ್ಗದಲ್ಲಿ ರೈತರು ಕಷ್ಟಪಟ್ಟು ಬೆಳೆದ ಈರುಳ್ಳಿ ಬೆಳೆ ತುಂಬಲು ಖಾಲಿ ಚೀಲವೂ ಸಿಗದೆ ಈರುಳ್ಳಿ ಚೀಲಕ್ಕಾಗಿ ರೈತರ ಪರದಾಡುವ ಸ್ಥಿತಿ ಎದುರಾಗಿದೆ.
ಬೆಳೆದ ಈರುಳ್ಳಿ ತುಂಬಲು ಚೀಲವಿಲ್ಲದೆ ಚಿತ್ರದುರ್ಗದಲ್ಲಿ ರೈತರ ಪರದಾಟ
ಚಿತ್ರದುರ್ಗ ನಗರದ ಗಾಂಧಿ ವೃತ್ತದ ಬಳಿಯ ಅಂಗಡಿಗಳಲ್ಲಿ ಈರುಳ್ಳಿ ಚೀಲಕ್ಕಾಗಿ ರೈತರು ಅಲೆದಾಡುವ ದೃಶ್ಯ ಸಾಮಾನ್ಯವಾಗಿದೆ. ಪ್ರತಿನಿತ್ಯ ಅಂಗಡಿಗಳ ಬಳಿ ಖಾಲಿ ಚೀಲಾಕ್ಕಾಗಿ ರೈತರು ಜಮಾಯಿಸುತ್ತಿದ್ದಾರೆ.
ಇನ್ನೂ ರೈತರು ಖಾಲಿ ಚೀಲಕ್ಕಾಗಿ ಅಲೆಯುವುದನ್ನು ಮನಗಂಡ ಅಂಗಡಿ ಮಾಲೀಕರು ಈರುಳ್ಳಿ ಚೀಲ ಸ್ಟಾಕ್ ಇಲ್ಲ ಎಂದು ಬರೆದು ತೂಗಿ ಹಾಕಿದ್ದಾರೆ. ಈ ಹಿನ್ನಲೆ ರೈತರು ಈರುಳ್ಳಿ ತುಂಬಲು ಚೀಲ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.