ಚಿತ್ರದುರ್ಗ: ರೈತ ಸಂಘಟನೆಯ ಮುಖಂಡರೊಬ್ಬರು ರಸ್ತೆಯಲ್ಲಿ ಅಡ್ಡಲಾಗಿ ಮಲಗಿ ಪೊಲೀಸರ ಜೊತೆ ವಾಗ್ವಾದ ನಡೆಸಿರುವ ಘಟನೆ ಚಿತ್ರದುರ್ಗ ನಗರದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.
ರಸ್ತೆ ಮೇಲೆ ಮಲಗಿ ರೈತನ ಪ್ರತಿಭಟನೆ : ಪೊಲೀಸರೊಂದಿಗೆ ಕೆಲ ಕಾಲ ವಾಗ್ವಾದ - ಚಿತ್ರದುರ್ಗದಲ್ಲಿ ರೈತರ ಪ್ರತಿಭಟನೆ
ರಸ್ತೆ ಮೇಲೆ ಅಡ್ಡಲಾಗಿ ಮಲಗುತ್ತಿದ್ದಂತೆ ರೈತ ಮುಖಂಡನಿಗೆ ಏಳುವಂತೆ ಪೊಲೀಸರು ಮನವಿ ಮಾಡಿದರು. ಆದರೂ, ರೈತ ಮುಖಂಡ ಮೇಲೇಳಲ್ಲಿಲ್ಲ. ಆತನನ್ನ ಒತ್ತಾಯಪೂರ್ವಕವಾಗಿ ಮೇಲೇಳಿಸಲು ಮುಂದಾದಾಗ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು..
ಪೊಲೀಸರೊಂದಿಗೆ ಕೆಲ ಕಾಲ ವಾಗ್ವಾದ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಇಂದು ದೇಶಾದ್ಯಂತ ರೈತರು ಚಕ್ಕಾ ಜಾಮ್ ಪ್ರತಿಭಟನೆಗೆ ಕರೆಕೊಟ್ಟಿದ್ದರು. ಈ ಹಿನ್ನೆಲೆ ರೈತ ಸಂಘಟನೆಗಳ ಮುಖಂಡರು ಹೆದ್ದಾರಿ ತಡೆದು ಪ್ರತಿಭಟಿಸಿದರು.
ಬಳಿಕ ಹೆದ್ದಾರಿ ಸರ್ವಿಸ್ ರೋಡ್ ಬಂದ್ ಮಾಡಿ, ರಸ್ತೆ ಮೇಲೆ ಅಡ್ಡಲಾಗಿ ಮಲಗುತ್ತಿದ್ದಂತೆ ರೈತ ಮುಖಂಡನಿಗೆ ಏಳುವಂತೆ ಪೊಲೀಸರು ಮನವಿ ಮಾಡಿದರು. ಆದರೂ, ರೈತ ಮುಖಂಡ ಮೇಲೇಳಲ್ಲಿಲ್ಲ. ಆತನನ್ನ ಒತ್ತಾಯಪೂರ್ವಕವಾಗಿ ಮೇಲೇಳಿಸಲು ಮುಂದಾದಾಗ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು.