ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಎಫೆಕ್ಟ್.. ಸೂಕ್ತ ಬೆಲೆ ಸಿಗದೆ ಬದನೆಕಾಯಿ ರಸ್ತೆಗೆಸೆದ ರೈತ.. - farmer dropped Brinjal on road in Chitradurga

ಹೊಸದುರ್ಗ ತಾಲೂಕಿನ ಕಂಚೀಪುರ ಗ್ರಾಮದಲ್ಲಿ ಕಷ್ಟಪಟ್ಟು ಸಾಲ ಮಾಡಿ ಬೆಳೆದಿದ್ದ ಬದನೆಕಾಯಿ ಬೆಳೆ ನೆಲಕಚ್ಚಿದೆ.

ಬದನೆಕಾಯಿ ರಸ್ತೆಗೆಸೆದ ರೈತ
ಬದನೆಕಾಯಿ ರಸ್ತೆಗೆಸೆದ ರೈತ

By

Published : May 4, 2020, 6:22 PM IST

ಚಿತ್ರದುರ್ಗ: ಮಹಾಮಾರಿ ಕೊರೊನಾ ವೈರಸ್​ನಿಂದಾಗಿ ಜಿಲ್ಲೆಯ ರೈತರು ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯ ಹೊಸದುರ್ಗ ತಾಲೂಕಿನ ಕಂಚೀಪುರ ಗ್ರಾಮದಲ್ಲಿ ಕಷ್ಟಪಟ್ಟು ಸಾಲ ಮಾಡಿ ಬೆಳೆದಿದ್ದ ಬದನೆಕಾಯಿ ಬೆಳೆ ನೆಲಕಚ್ಚಿದೆ.

ಬದನೆಕಾಯಿ ರಸ್ತೆಗೆಸೆದ ರೈತ..

ಬದನೆಕಾಯಿ ಬೆಳೆದಿದ್ದ ರೈತ ಮಾರುಕಟ್ಟೆಗೆ ಕೊಂಡೊಯ್ಯಲಾಗದೆ ಹೈರಾಣಾಗಿದ್ದಾನೆ. ರೈತ ರಾಕೇಶ್‌ಗೌಡ ತಮ್ಮ 2 ಎಕರೆ ಜಮೀನಿನಲ್ಲಿ ಬದನೆಕಾಯಿ ಬೆಳೆದಿದ್ದರು. ಆದರೆ, ಸರಿಯಾದ ಬೆಲೆ ಇಲ್ಲದೆ ಮನನೊಂದ ಟ್ರ್ಯಾಕ್ಟರ್ ಮೂಲಕ ಬದನೆಕಾಯಿ ರಸ್ತೆಗೆ ಸುರಿದಿದ್ದಾರೆ.

ಸಾಲ ಮಾಡಿ ಕಷ್ಟಪಟ್ಟು ಬೆಳೆದಿದ್ದ ಬದನೆಕಾಯಿ ಬೆಳೆಯ ನಷ್ಟಕ್ಕೆ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ABOUT THE AUTHOR

...view details