ಕರ್ನಾಟಕ

karnataka

ETV Bharat / state

ಸುರಿವ ಮಳೆ ಲೆಕ್ಕಿಸದೆ 'ಪೊಗರು' ಸಿನಿಮಾ ವೀಕ್ಷಣೆಗೆ ಕಾದು ಕುಳಿತ ಅಭಿಮಾನಿಗಳು - 'ಪೊಗರು' ಸಿನಿಮಾ ಬಿಡುಗಡೆ

ಬೆಳಗ್ಗೆ ಐದು ಗಂಟೆಗೆ ಚಿತ್ರಮಂದಿರದತ್ತ ಮುಖ ಮಾಡಿದ ಅಭಿಮಾನಿಗಳು ಸುರಿವ ಮಳೆ ಲೆಕ್ಕಿಸದೆ ಸಿನಿಮಾ ವೀಕ್ಷಣೆಗೆ ಆಸಕ್ತಿ ತೋರಿದ್ದಾರೆ. ಬಸವೇಶ್ವರ ಚಿತ್ರಮಂದಿರದ ಮುಂಭಾಗದಲ್ಲಿ ನಟ ಧ್ರುವಸರ್ಜಾ ಕಟೌಟ್ ರಾರಾಜಿಸುತ್ತಿದೆ..

ಪೊಗರು ಸಿನಿಮಾ
ಪೊಗರು ಸಿನಿಮಾ

By

Published : Feb 19, 2021, 8:58 AM IST

ಚಿತ್ರದುರ್ಗ: ಇಂದು 'ಪೊಗರು' ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಮಳೆಯನ್ನೂ ಲೆಕ್ಕಿಸದೆ ಅಭಿಮಾನಿಗಳು ಬೆಳಗ್ಗೆಯಿಂದಲೇ ಸಿನಿಮಾ ವೀಕ್ಷಣೆಗೆ ಚಿತ್ರಮಂದಿರದ ಮುಂಭಾಗ ಕಾದು ಕುಳಿತಿದ್ದಾರೆ.

ಇಂದು ಕೋಟೆನಾಡಿನ ಎರಡು ಚಿತ್ರಮಂದಿರಗಳಲ್ಲಿ 'ಪೊಗರು' ಚಲನಚಿತ್ರ ತೆರೆ ಕಾಣಲಿದೆ. ಬೆಳಗ್ಗೆ 6ಗಂಟೆಯಿಂದಲೇ ಶೋ ಆರಂಭಗೊಳ್ಳುತ್ತಿದೆ. ಹಾಗಾಗಿ, ನಗರದ ಬಸವೇಶ್ವರ ಚಿತ್ರಮಂದಿರದ ಮುಂಭಾಗದಲ್ಲಿ ಅಭಿಮಾನಿಗಳು ಚಲನಚಿತ್ರ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ.

'ಪೊಗರು' ಸಿನಿಮಾ ವೀಕ್ಷಣೆಗೆ ಕಾದು ಕುಳಿತ ಅಭಿಮಾನಿಗಳು

ಬೆಳಗ್ಗೆ ಐದು ಗಂಟೆಗೆ ಚಿತ್ರಮಂದಿರದತ್ತ ಮುಖ ಮಾಡಿದ ಅಭಿಮಾನಿಗಳು ಸುರಿವ ಮಳೆ ಲೆಕ್ಕಿಸದೆ ಸಿನಿಮಾ ವೀಕ್ಷಣೆಗೆ ಆಸಕ್ತಿ ತೋರಿದ್ದಾರೆ. ಬಸವೇಶ್ವರ ಚಿತ್ರಮಂದಿರದ ಮುಂಭಾಗದಲ್ಲಿ ನಟ ಧ್ರುವಸರ್ಜಾ ಕಟೌಟ್ ರಾರಾಜಿಸುತ್ತಿದೆ. ಬಾಳೆ ಗಿಡ ಹಾಗೂ ತೋರಣಗಳಿಂದ ಚಿತ್ರಮಂದಿರವನ್ನು ಸಿಂಗರಿಸಲಾಗಿದೆ.

ಆದರೆ, ತಡರಾತ್ರಿಯಿಂದಲೇ ಕೋಟೆ ನಾಡಿನಲ್ಲಿ ಜಿಟಿಜಿಟಿ ಮಳೆ ಆರಂಭವಾಗಿದೆ. ಅದ್ದೂರಿಯಾಗಿ ಸಂಭ್ರಮಾಚರಣೆ ಮಾಡಬೇಕೆಂದು ಪ್ಲಾನ್ ಮಾಡಿಕೊಂಡಿದ್ದ​ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ.

ABOUT THE AUTHOR

...view details