ಚಿತ್ರದುರ್ಗ :ದಿವಂಗತ ನಟ ಪುನೀತ್ ರಾಜ್ ಕುಮಾರ್ ಇಂದು ನಮ್ಮೊಂದಿಗೆ ಇಲ್ಲ ಎನ್ನುವುದು ಬಿಟ್ಟರೆ ಅವರ ಆದರ್ಶಗಳು ರಾಜ್ಯದ ಜನರೊಟ್ಟಿಗೆ ಇವೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇತ್ತೀಚೆಗೆ ನಟ ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಖತ್ ಸದ್ದು ಮಾಡಿದೆ.
ಜೇಮ್ಸ್ ಟೀಸರ್ ಹಾಕಿ ಆರಕ್ಷತೆ ಮಾಡಿಕೊಂಡ ಜೋಡಿ.. ಚಿತ್ರದುರ್ಗ ನಗರದ ಕೆಇಬಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯಲ್ಲಿ ನವ ಜೋಡಿ ಪುನೀತ್ ಮೇಲಿನ ಅಭಿಮಾನವನ್ನ ತೋರಿಸಿದೆ. ಬಾಲ್ಯದಿಂದಲೂ ಪುನೀತ್ ಅಪ್ಪಟ ಅಭಿಮಾನಿಯಾಗಿರುವ ಚೋಳಗಟ್ಟದ ಆರ್ ಮನೋಜ್ ಹಾಗೂ ಎಸ್ ಪಲ್ಲವಿ ವಿವಾಹ ನೆರವೇರಿತು.
ಇವರ ವಿವಾಹಕ್ಕೆ ಇಡೀ ಕಲ್ಯಾಣ ಮಂಟಪವನ್ನು ಅಪ್ಪು ಭಾವಚಿತ್ರಗಳಿಂದ ಸಿಂಗರಿಸಲಾಗಿತ್ತು. ಮತ್ತು ಬೃಹತ್ ಎಲ್‌ಇಡಿ ಪರದೆ ಮೇಲೆ ಜೇಮ್ಸ್ ಚಿತ್ರದ ಟೀಸರ್ ಪ್ರದರ್ಶಿಸಿ ದಂಪತಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ಆರತಕ್ಷತೆ ಸಮಾರಂಭದಲ್ಲಿ ಜೇಮ್ಸ್ ಚಿತ್ರದ ಟೀಸರ್ ಪ್ರದರ್ಶನ ಕಂಡು ಮದುವೆಗೆ ಬಂದ ಬಂಧು-ಮಿತ್ರರು ಸಂತಸಗೊಂಡರು.
ಅಪ್ಪು ಭಾವಚಿತ್ರಗಳಿಂದ ಮದುವೆ ಮಂಟಪ ಸಿಂಗಾರ ಇದರ ಜತೆಗೆ ಎರಡು ದಿನ ಮದುವೆ ಸಂಭ್ರಮದಲ್ಲಿ ಪುನೀತ್ ಹಾಡುಗಳುನ್ನು ಹಾಕುವ ಮೂಲಕ ಅಭಿಮಾನ ಮೆರೆದಿದ್ದಾರೆ. ಅಪ್ಪು ಇಲ್ಲ ಎನ್ನಲು ಸಾಧ್ಯವಾಗುತ್ತಿಲ್ಲ. ಅವರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಇಡೀ ಕಲ್ಯಾಣ ಮಂಟಪವನ್ನು ಪುನೀತ್ ಭಾವಚಿತ್ರಗಳಿಂದ ಸಿಂಗರಿಸಿದ್ದೆವು. ಮದುವೆಗೆ ಬಂದ ಸಂಬಂಧಿಕರು, ಸ್ನೇಹಿತರು ಟೀಸರ್ ನೋಡಿ ಸಂಭ್ರಮದ ಜತೆ ಮೌನವಹಿಸಿದರು’ ಎಂದು ಮನೋಜ್-ಪಲ್ಲವಿ ತಿಳಿಸಿದರು.