ಕರ್ನಾಟಕ

karnataka

ETV Bharat / state

ಪುನೀತ್​ ಸ್ಫೂರ್ತಿ.. ಚಿತ್ರದುರ್ಗದಲ್ಲಿ 40ಕ್ಕೂ ಹೆಚ್ಚು ಅಭಿಮಾನಿಗಳಿಂದ ನೇತ್ರದಾನ - eye donation by Puneeth Rajkumar fans

ಚಳ್ಳಕೆರೆಯಲ್ಲಿ ಆಯೋಜಿಸಿದ್ದ ಪುನೀತ ನಮನ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಅಭಿಮಾನಿಗಳು ನೇತ್ರದಾನ ಮಾಡುವುದಾಗಿ ಸಹಿ ಹಾಕಿದರು.

tribute to Puneeth Rajkumar at Chitradurga
ಚಳ್ಳಕೆರೆಯಲ್ಲಿ ಪುನೀತ ನಮನ ಕಾರ್ಯಕ್ರಮ

By

Published : Nov 18, 2021, 5:29 PM IST

ಚಿತ್ರದುರ್ಗ: ಚಳ್ಳಕೆರೆ ಪುನೀತ್ ಯೂಥ್ ಬ್ರಿಗೇಡ್ ವತಿಯಿಂದ ನಗರದ ಪಿಪಿಟಿಸಿ ಸಭಾಂಗಣದಲ್ಲಿ ಪುನೀತ ನಮನ ಕಾರ್ಯಕ್ರಮವನ್ನು(tribute to Puneeth Rajkumar) ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಪುನೀತ್​​ ರಾಜ್​ಕುಮಾರ್​ ಅವರ 40ಕ್ಕೂ ಹೆಚ್ಚು ಅಭಿಮಾನಿಗಳು ನೇತ್ರದಾನ(eye donation) ಮಾಡುವುದಾಗಿ ಸಹಿ ಹಾಕಿದರು.

ಚಳ್ಳಕೆರೆಯಲ್ಲಿ ಪುನೀತ ನಮನ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಮಾತನಾಡಿ, ಪುನೀತ್ ಅವರು ನಮ್ಮ ಜೊತೆಗೆ ಇಲ್ಲದಿದ್ದರೂ ಅವರ ಆದರ್ಶಗಳು ನಮ್ಮೊಂದಿಗಿವೆ. ಅವರ ಗುಣಗಳಲ್ಲಿ ಪ್ರತಿಯೊಬ್ಬರು ಒಂದೊಂದನ್ನು ಅಳವಡಿಸಿಕೊಂಡರೆ ಅದು ಅಪ್ಪು ಅವರಿಗೆ ನಾವು ನೀಡುವ ಗೌರವ‌. ರಾಜಕುಮಾರನ ಮಗನಾಗಿ ಹುಟ್ಟಿ ರಾಜನಾಗಿ ನಮ್ಮನ್ನು ಅಗಲಿದ್ದಾರೆ. ಇಂದು ಸಮಾಜದಲ್ಲಿ ರಾಜಕೀಯ ನಾಯಕರೇ ಆಗಿರಬಹುದು ಅಥವಾ ಬೇರೆ ಯಾವುದೇ ಕ್ಷೇತ್ರದವರಾದರೂ ಒಂದು ಸಣ್ಣ ಸಹಾಯ ಮಾಡಿದ್ರೂ ಊರು ತುಂಬ ಹೇಳಿಕೊಂಡು ಬರುವವರೇ ಹೆಚ್ಚು. ಅಂತಹದರಲ್ಲಿ ಪುನೀತ್​ ರಾಜ್​ಕುಮಾರ್​ ಬಲಗೈಲಿ ಮಾಡಿದ ಸಹಾಯ ಎಡಗೈಗೆ ಗೊತ್ತಗಾದ ರೀತಿಯಲ್ಲಿ ಮಾಡಿ ಕಣ್ಮರೆಯಾಗಿದ್ದಾರೆ ಎಂದರು.

ಇದನ್ನೂ ಓದಿ:ಧಾರವಾಡ: ಆಮೆಗತಿಯಲ್ಲಿ ಸಾಗಿದ ಈಜುಕೊಳ ನಿರ್ಮಾಣ ಕಾಮಗಾರಿ

ಅಭಿಮಾನಿಗಳು ಅಪ್ಪು ಅವರ ಗೀತೆಗಳನ್ನು ಹಾಡುವ ಮೂಲಕ ನಮನ ಸಲ್ಲಿಸಿದರು. ಅಭಿಮಾನಿಗಳು ಕಾರ್ಯಕ್ರಮ ಮುಗಿದ ನಂತರ ನೂರಾರು ಜನರಿಗೆ ಅನ್ನ ಸಂತರ್ಪಣೆ ಮಾಡಿದರು. ಸಮಾಜ ಸೇವಕ ಚೇತನ್ ಕುಮಾರ್, ಉಮೇಶ್ ಸೇರಿದಂತೆ ನಗರಸಭೆ ಸದಸ್ಯರು ಜಿಲ್ಲೆಯ ಅನೇಕ ಭಾಗದವರು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ನಟ ಶಿವರಾಜ್ ಕುಮಾರ್ ಅವರನ್ನು ಕರೆಸಿ ದೊಡ್ಡ ಮಟ್ಟದಲ್ಲಿ ಈ ಕಾರ್ಯಕ್ರಮ ಮಾಡಬೇಕು, ಅದಕ್ಕೆ ಸಂಪೂರ್ಣ ಸಹಕಾರ ಇರುತ್ತದೆ ಎಂದು ಶಾಸಕ ರಘು ಮೂರ್ತಿ ಹೇಳಿದರು.

ABOUT THE AUTHOR

...view details