ಚಿತ್ರದುರ್ಗ:ಇಲ್ಲಿನ ಅತಿಥಿ ಉಪನ್ಯಾಸಕರೊಬ್ಬರ ಎರಡೂ ಕಿಡ್ನಿ ವೈಫಲ್ಯವಾಗಿದ್ದು, ಚಿಕಿತ್ಸೆಗೆ ಭರಿಸಲು ಹಣವಿಲ್ಲದೆ ಬಡ ಕುಟುಂಬ ಕಣ್ಣೀರಿನಿಲ್ಲಿ ಕೈ ತೊಳೆಯುತ್ತಿದೆ.
14 ವರ್ಷಗಳ ಕಾಲ ಸರ್ಕಾರದ ಶಿಕ್ಷಣ ಇಲಾಖೆಗೆ ದುಡಿದ ಅತಿಥಿ ಉಪನ್ಯಾಸಕನಿಗೆ ಸೇವಾ ಭದ್ರತೆ ಸೇರಿದಂತೆ ಸರಿಯಾದ ಚಿಕಿತ್ಸೆ ಇಲ್ಲದೆ ಜಿಲ್ಲಾಸ್ಪತ್ರೆಯಲ್ಲಿ ಕೊಳೆಯುವಂತಾಗಿದೆ. ಜಿಲ್ಲೆಯ ಹೊಸದುರ್ಗ ತಾಲೂಕಿನ ನಾಗೇಂದ್ರಪ್ಪ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ 14 ವರ್ಷಗಳ ಕಾಲ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಕಿಡ್ನಿ ವೈಫಲ್ಯ: ಸರ್ಕಾರದ ನೆರವಿಗೆ ಕಾಯುತ್ತಿದೆ ಅತಿಥಿ ಉಪನ್ಯಾಸಕನ ಕುಟುಂಬ ನಾಗೇಂದ್ರಪ್ಪ ತಮ್ಮ ಎರಡೂ ಕಿಡ್ನಿ ಕಳೆದುಕೊಂಡಿದ್ದು, ಚಿಕಿತ್ಸೆಗಾಗಿ ವೆಚ್ಚ ಭರಿಸಲು ಸರ್ಕಾರದ ಸಹಾಯಹಸ್ತಕ್ಕಾಗಿ ಕಾದು ಕುಳಿತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಕಾಲೇಜು ಇವರಿಗೆ ಸೇವಾ ಭದ್ರತೆಯೂ ಸೇರಿ ಪಿಎಫ್, ಇಎಸ್ಐ ಸೌಲಭ್ಯ ಕೂಡ ಕಲ್ಪಿಸದೆ ಇರುವುದು ಇತರೆ ಅತಿಥಿ ಉಪನ್ಯಾಸಕರ ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ಜಿಲ್ಲಾಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ತೆರಳುವಂತೆ ತಿಳಿಸಿದ್ದಾರೆ. ಅದರೆ ಇವರ ಬಳಿ ಚಿಕಿತ್ಸೆಗೆ ಭರಿಸಲು ಹಣ ಇಲ್ಲದೆ ನಾಗೇದ್ರಪ್ಪನ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ.
ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದ ಅತಿಥಿ ಉಪನ್ಯಾಸಕ ನಾಗೇಂದ್ರಪ್ಪ ಮಡದಿ ಕೂಲಿ ನಾಲಿ ಮಾಡುವ ಮೂಲಕ ಜೀವನದ ಬಂಡಿ ಸಾಗಿಸುತ್ತಿದ್ದಾರೆ. ಇದರಿಂದ ಹೆಚ್ಚಿನ ಚಿಕಿತ್ಸೆಗೆ ಸರ್ಕಾರ ತಕ್ಷಣ ನೆರವಿಗೆ ಧಾವಿಸಬೇಕೆಂದು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರಕಾಶ್ ಒತ್ತಾಯಿಸಿದ್ದಾರೆ.