ಕರ್ನಾಟಕ

karnataka

ETV Bharat / state

ವೈದ್ಯನ ಹೆಸರಲ್ಲಿ ಯುವತಿರಿಗೆ ಕಿರುಕುಳ ಆರೋಪ: ಸ್ಥಳೀಯರಿಂದ ಬಿತ್ತು ಗೂಸಾ - ಮಣಿಪಾಲ್ ಕ್ಲಿನಿಕ್

ಡಾ. ಪೋಷಕ್‌ನ ಖಾಸಗಿ ಕ್ಲಿನಿಕ್ ನೋಡಿದ್ರೆ ರೋಗಿಗಳು ಹೆಜ್ಜೆ ಇಡಲು ಕೂಡ ಹಿಂದೇಟು ಹಾಕುತ್ತಾರೆ. ಪಾಳು ಬಿದ್ದ ಮನೆಯಲ್ಲಿ ಈ ಡಾಕ್ಟರ್ ಹೇಗೆ ಚಿಕಿತ್ಸೆ ನೀಡುತ್ತಾನೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈತನ ಬಳಿಯಿರುವ ವೈದ್ಯಕೀಯ ಸಂಬಂಧಿತ ಸಲಕರಣೆಗಳು ಎಲ್ಲವೂ ತುಕ್ಕು ಹಿಡಿದಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

fake-doctor-have-been-handed-over-to-the-police-by-a-locals
ಸ್ಥಳೀಯರಿಂದ ಸೈಕೋ ವೈದ್ಯನಿಗೆ ಬಿತ್ತು ಗೂಸಾ

By

Published : Jan 29, 2021, 9:09 PM IST

ಚಿತ್ರದುರ್ಗ: ರೋಗಿಗಳಿಗೆ ಔಷಧ ನೀಡುವ ನೆಪದಲ್ಲಿ ಕ್ಲಿನಿಕ್ ಇಟ್ಟುಕೊಂಡು ಹುಡುಗಿಯರ ಮೊಬೈಲ್ ನಂಬರ್, ಪ್ರೊಫೈಲ್ ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ನಕಲಿ ವೈದ್ಯನಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

ಮಣಿಪಾಲ್ ಕ್ಲಿನಿಕ್ ಎಂಬ ಹೆಸರಿಟ್ಟುಕೊಂಡು ದಂತ ವೈದ್ಯ ಪೋಷಕ್ ಗೂಡಿನಂತಿದ್ದ ಅಂಗಡಿಯಲ್ಲಿ ನೂರಾರು ಹುಡುಗಿಯರ ಮೊಬೈಲ್ ನಂಬರ್ ಸಂಗ್ರಹಿಸಿಟ್ಟಿದ್ದನಂತೆ. ಸ್ಥಳೀಯರು ಈತನಿಗೆ ಸೈಕೋ ವೈದ್ಯ ಅಂತಾನೆ ಕರೆಯುತ್ತಿದ್ದರು.

37 ವರ್ಷದ ಈತ 500ಕ್ಕೂ ಹೆಚ್ಚು ಹುಡುಗಿಯರ ಪ್ರೊಫೈಲ್ ರೆಡಿ ಮಾಡಿಕೊಂಡಿದ್ದ. ಇದನ್ನು ಮ್ಯಾಟ್ರಿಮೊನಿಯಂತೆ ಬಳಸುತ್ತಿದ್ದು, ಯಾರಾದರೂ ಕೇಳಿದರೆ ಅವರೊಂದಿಗೆ ಮಾತುಕತೆ ನಡೆಸಿ ಮದುವೆ ಮಾಡಿಸಲು ನೆರವಾಗುತ್ತೇನೆ ಅಂತ ಹೇಳುತ್ತಿದ್ದನಂತೆ.

ಸ್ಥಳೀಯರಿಂದ ನಕಲಿ ವೈದ್ಯನಿಗೆ ಬಿತ್ತು ಗೂಸಾ

ಇಷ್ಟೇ ಅಲ್ಲದೆ ಈತನ ಅಂಗಡಿಯಲ್ಲಿ ಹತ್ತಾರು ಮೊಬೈಲ್ ಫೋನ್​ಗಳು, ಲ್ಯಾಪ್​​ಟಾಪ್ ದೊರೆತಿದ್ದು, ಯುವಕರಿಗೆ ವಂಚಿಸಿಸುವುದೇ ಈತನ ಕಾಯಕ ಅಂತ ಸ್ಥಳೀಯರು ಆರೋಪಿಸಿದ್ದಾರೆ.

ಯುವತಿಯರಿಗೆ ಫೋನ್ ಮಾಡಿ ಟಾರ್ಚರ್

ಆನ್‌ಲೈನ್ ಮೂಲಕ ಯುವತಿಯರ ಮಾಹಿತಿ ಕಲೆಹಾಕಿ, ಹಲವರಿಗೆ ಫೋನ್‌ ಕರೆ ಮೂಲಕ ಟಾರ್ಚರ್ ನೀಡಿದ್ದಾನೆ ಎಂಬ ಆರೋಪಗಳು ಈ ವೈದ್ಯನ ಮೇಲಿದೆ. ಆದರೆ ಯವೊಬ್ಬ ಯುವತಿಯರು ಭಯದಿಂದ ದೂರು ನೀಡಲು ಮುಂದಾಗಿಲ್ಲ ಎಂದು ಸ್ಥಳೀಯರೇ ಆರೋಪಿಸಿದ್ದಾರೆ.

ಪಾಳು ಬಿದ್ದ ಮನೆಯಲ್ಲಿ ಚಿಕಿತ್ಸೆ

ಡಾ. ಪೋಷಕ್‌ನ ಖಾಸಗಿ ಕ್ಲಿನಿಕ್ ನೋಡಿದ್ರೆ ರೋಗಿಗಳು ಹೆಜ್ಜೆ ಇಡಲು ಕೂಡ ಹಿಂದೇಟು ಹಾಕುತ್ತಾರೆ. ಪಾಳು ಬಿದ್ದ ಮನೆಯಲ್ಲಿ ಈ ಡಾಕ್ಟರ್ ಹೇಗೆ ಚಿಕಿತ್ಸೆ ನೀಡುತ್ತಾನೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈತನ ಬಳಿಯಿರುವ ವೈದ್ಯಕೀಯ ಸಂಬಂಧಿತ ಸಲಕರಣೆಗಳು ತುಕ್ಕು ಹಿಡಿದಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸರ್ಕಾರಿ ವೈದ್ಯನಂತೆ ಆನ್‌ಲೈನ್‌ನಲ್ಲಿ ನಟನೆ ಆರೋಪ

ತಾನು ಸರ್ಕಾರಿ ವ್ಯದ್ಯನಾಗಿ ಕೆಲಸ ಮಾಡುತ್ತಿರುವುದಾಗಿ ಆನ್‌ಲೈನ್ ಮದುವೆ ನೋಂದಣಿಯ ವೆಬ್​​ಸೈಟ್‌ಗಳಲ್ಲಿ ಬರೆದುಕೊಂಡಿದ್ದಾನೆ. ಬಳಿಕ ಯುವತಿಯರು ಹಾಗೂ ಮಹಿಳೆಯರ ಫೋನ್‌ ನಂಬರ್‌ಗಳನ್ನು ಕಲೆಹಾಕಿ, ಬೇರೆ ಬೇರೆ ನಂಬರ್​​​​ಗಳಿಂದ ಕರೆ ಮಾಡಿ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ‌

ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಲಾಕ್ಷ, ಡಾ. ಪೋಷಕ್ ಸರ್ಕಾರಿ ವೈದ್ಯರಲ್ಲ. ಆತ ನಕಲಿ ವೈದ್ಯನೋ ಅಥವಾ ಅಸಲಿಯೋ ಎಂದು ಆತನ ಕ್ಲಿನಿಕ್ ಭೇಟಿ ಮಾಡಿ ಪರಿಶೀಲನೆ ನಡೆಸುದಾಗಿ ಹೇಳಿದ್ದಾರೆ. ತಪ್ಪಿತಸ್ಥ ಎಂದು ಕಂಡು ಬಂದರೆ ಕೆಪಿಎಂಇ ಕಾಯ್ದೆ ಅನ್ವಯವಾಗಿ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:ಜಿಲ್ಲೆಯಲ್ಲಿ 7798 ಕೊರೊನಾ ವಾರಿಯರ್ಸ್‌ಗೆ ಲಸಿಕೆ ನೀಡಲಾಗಿದೆ: ಚಿತ್ರದುರ್ಗ ಡಿಹೆಚ್​ಒ

ABOUT THE AUTHOR

...view details