ಚಿತ್ರದುರ್ಗ: ಕುಮಾರಸ್ವಾಮಿ ಎಲ್ಲಿ ಅಧಿಕಾರ ಇರುತ್ತೋ ಅಲ್ಲಿಗೆ ಹೋಗ್ತಾರೆ. ಈಗ ಸಿಎಂ ಬಿಎಸ್‌ವೈ ನನ್ನ ಆತ್ಮೀಯ ಸ್ನೇಹಿತ ಎಂದು ಹೇಳ್ತಿದ್ದಾರೆ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ವೇಳೆ ಪರಿಸ್ಥಿತಿ ಹಾಗಿತ್ತು. ಅದರ ಲಾಭ ಬಿಜೆಪಿ ಪಡೆದುಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೆದ್ದು ಕೆಲಸ ಮಾಡಬೇಕು ಎಂಬುವುದಿಲ್ಲ. ನಾವು ಸೋತಾಗಲೂ ಕೂಡ ಜನರ ಮೇಲೆ ಬೇಸರ ಪಟ್ಟಿಲ್ಲ. ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿದ್ದೇವೆ. ಆದ್ರೆ ಕುಮಾರಸ್ವಾಮಿ ಏನೇನು ಮಾಡ್ತಾರೆ ಎಂಬುವುದು ರಾಜ್ಯದ ಜನತೆಗೆ ಗೊತ್ತಿದೆ. ಈ ಹಿಂದೆ ಏನು ಮಾಡಿದ್ರು ಎಂದೂ ಗೊತ್ತಿದೆ ಎಂದರು.