ಚಿತ್ರದುರ್ಗ: ಲೋಡ್ಗಟ್ಟಲೇ ಮಣ್ಣು ಸಾಗಿಸಿ ರಸ್ತೆ ಹದಗೆಡಿಸಿರುವ ಕುರಿತು ಈಟಿವಿ ಭಾರತ ವರದಿ ಬಿತ್ತರಿಸುತ್ತಿದಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಇಂಗಳದಾಳ್ ಗ್ರಾಮಕ್ಕೆ ಭೇಟಿ ನೀಡಿ ಮಣ್ಣು ಸರಬರಾಜು ಮಾಡಿದ ಕಂಪನಿಯ ಎಂಡಿಯನ್ನು ತರಾಟೆಗೆ ತಗೆದುಕೊಂಡಿದ್ದಾರೆ.
ಪಿಎಂಸಿ ಕಂಪನಿಯಿಂದ ಪರವಾನಗಿ ಪಡೆದು ರಾಷ್ಟ್ರೀಯ ಹೆದ್ದಾರಿ 4ರ ಕಾಮಗಾರಿಗೆ ಕೆಆರ್ಡಿ ಇನ್ಫಾಟೆಕ್ ಎಂಬ ಕಂಪನಿ ಕಳೆದ 1 ತಿಂಗಳಿನಿಂದ ಇಂಗಳದಾಳ್ ಹಾಗೂ ಲಂಬಾಣಿಹಟ್ಟಿ ಗ್ರಾಮದ ರಸ್ತೆಯಲ್ಲಿ ಲಾರಿಗಳ ಮೂಲಕ ದಿನವಿಡೀ ಟನ್ಗಟ್ಟಲೇ ಮಣ್ಣು ಸರಬರಾಜು ಮಾಡುತ್ತಿತ್ತು.
60 ಟನ್ ಲಾರಿಗಳು ಎಂಡಿಆರ್ ರಸ್ತೆಯ ಮೂಲಕ ಸಂಚಾರ ನಡೆಸಿದ ಪರಿಣಾಮ ಇತ್ತೀಚೆಗಷ್ಟೇ ಕಾಮಗಾರಿ ಪೂರ್ಣವಾಗಿದ್ದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದರು. ಈ ಕುರಿತು ಎರಡು ದಿನಗಳ ಹಿಂದಷ್ಟೇ ಈಟಿವಿ ಭಾರತ ವರದಿ ಪ್ರಕಟಿಸಿತ್ತು.
ಇದನ್ನೂ ಓದಿ:ಲೋಡ್ಗಟ್ಟಲೇ ಮಣ್ಣು ಸಾಗಿಸಿ ರಸ್ತೆ ಹದಗೆಡಿಸಿದ ಆರೋಪ : ಕಂಪನಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ಗುಂಡಿ ಮುಚ್ಚಿದ ರಸ್ತೆ ನೋಡಿ ಸಿಡಿಮಿಡಿಗೊಂಡ ಶಾಸಕರು