ಚಿತ್ರದುರ್ಗ: ಒಂದೇ ಮತದ ಅಂತರದಿಂದ ಮೊಳಕಾಲ್ಮೂರು ತಾಲೂಕಿನ ಇಬ್ಬರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಒಂದೇ ತಾಲೂಕಿನ ಇಬ್ಬರು ಅಭ್ಯರ್ಥಿಗಳಿಗೆ ಒಂದು ಮತ ಅಂತರದ ಗೆಲುವು! - ಗ್ರಾಮ ಪಂಚಾಯತ್ ಚುನಾವಣೆ
ಮೊಳಕಾಲ್ಮೂರು ತಾಲೂಕಿನ ಇಬ್ಬರು ಅಭ್ಯರ್ಥಿಗಳು ಒಂದೇ ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.
election-candidates-wins-with-1-vote-difference
ತುಮಕೂರ್ಲಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕುಮಿ ಗ್ರಾಮದ ಜಂಗಮ ಕಾಮಯ್ಯ 187 ಮತ ಹಾಗೂ ಪರಾಜಿತ ಅಭ್ಯರ್ಥಿ ಗುಡ್ಲನಾಯಕ 186 ಮತ ಪಡೆದುಕೊಂಡಿದ್ದು, ಒಂದು ಮತದ ಅಂತರದಿಂದ ಜಂಗಮ ಕಾಮಯ್ಯ ಜಯಭೇರಿ ಬಾರಿಸಿದ್ದಾರೆ.
ಇನ್ನು ರಾಯಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಾರಪೋತ ಜೋಗಿಹಳ್ಳಿಯಲ್ಲೂ ಕೂಡ ಬಸಮ್ಮ ಎಂಬ ಮಹಿಳೆ 152 ಮತ ಪಡೆದುಕೊಂಡು ಜಯದ ನಗೆ ಬೀರಿದ್ದು, ಪ್ರತಿಸ್ಪರ್ಧಿಯಾಗಿದ್ದ ತಾಯಮ್ಮ 151 ಮತ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.